ಚೆನ್ನೈ:ತಮಿಳು ಜಾನಪದ ಗಾಯಕಿ, ನಟಿ ಪರವೈ ಮುನಿಯಮ್ಮ ಮಧುರೈನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ವಿಕ್ರಮ್ ನಾಯಕ ನಟನಾಗಿ ಅಭಿನಯಿಸಿದ್ದ ಧೂಳ್ ಚಿತ್ರದಲ್ಲಿ ತಾವು ನಿರ್ವಹಿಸಿದ್ದ ಪಾತ್ರದಿಂದ ಮನೆಮಾತಾಗಿದ್ದ ಇವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದರು. 200ಕ್ಕೂ ಹೆಚ್ಚು ಜಾನಪದ ಗಾಯಕಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.
ಚಿಯಾ ವಿಕ್ರಂ ಸಿನಿಮಾದಲ್ಲಿ 'ಧೂಳ್' ಎಬ್ಬಿಸಿದ್ದ ನಟಿ, ಜಾನಪದ ಗಾಯಕಿ ಪರವೈ ಮುನಿಯಮ್ಮ ವಿಧಿವಶ - ಧೂಳ್
ಕಾಲಿವುಡ್ನ ಹಿರಿಯ ನಟಿ ಹಾಗೂ ಜಾನಪದ ಗಾಯಕಿ ಪರವೈ ಮುನಿಯಮ್ಮ ಮಧುರೈನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಇವರ ಅಗಲಿಕೆಗೆ ಸಿನಿಮಾ ಕ್ಷೇತ್ರದ ಕಲಾವಿದರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
![ಚಿಯಾ ವಿಕ್ರಂ ಸಿನಿಮಾದಲ್ಲಿ 'ಧೂಳ್' ಎಬ್ಬಿಸಿದ್ದ ನಟಿ, ಜಾನಪದ ಗಾಯಕಿ ಪರವೈ ಮುನಿಯಮ್ಮ ವಿಧಿವಶ paravai muniyamma](https://etvbharatimages.akamaized.net/etvbharat/prod-images/768-512-6590557-thumbnail-3x2-raj.jpg)
ಪರವೈ ಮುನಿಯಮ್ಮ
ಪರವೈ ಮುನಿಯಮ್ಮ ಅವರ ಅಗಲಿಕೆಗೆ ನಟ ಹಾಗೂ ದಕ್ಷಿಣ ಭಾರತ ಕಲಾವಿದರ ಸಂಘದ ಮಾಜಿ ಅಧ್ಯಕ್ಷ ನಾಸಿರ್ ಸಂತಾಪ ಸೂಚಿಸಿದ್ದಾರೆ. ''ಪರವೈ ಮುನಿಯಮ್ಮ ಅವರ ಅಗಲಿಕೆಯಿಂದ ಸಿನಿಮಾ ಕ್ಷೇತ್ರಕ್ಕಿಂತ, ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಸಿನಿಮಾ ಕಲಾವಿದರ ಪರವಾಗಿ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ'' ಎಂದು ಸಂತಾಪ ಸೂಚಿಸಿದ್ದಾರೆ. ನಾಸಿರ್ ಜೊತೆಗೆ ಕಾಲಿವುಡ್ನ ವಿವಿಧ ಕಲಾವಿದರು, ಗಣ್ಯರು ಪರವೈ ಮುನಿಯಮ್ಮ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.