ಕರ್ನಾಟಕ

karnataka

ಅಮೆರಿಕದೊಂದಿಗೆ ದೋಹಾ ಶಾಂತಿ ಒಪ್ಪಂದಕ್ಕೆ ಸಿದ್ಧವಾದ ಅಫ್ಘಾನಿಸ್ತಾನ

By

Published : Nov 10, 2020, 5:46 PM IST

ದೋಹಾ ಶಾಂತಿ ಒಪ್ಪಂದದ ಅನುಷ್ಠಾನಕ್ಕೆ ನಾವು ಸಿದ್ಧವಿದ್ದೇವೆ ಎಂದು ತಾಲಿಬಾನ್ ಯುಎಸ್​ನ ಹೊಸ ಬಿಡೆನ್ ಆಡಳಿತಕ್ಕೆ ಭರವಸೆ ನೀಡಿದೆ. ಈ ಒಪ್ಪಂದವು ಅಫ್ಘಾನಿಸ್ತಾನದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮುಖ್ಯವಾಗಿದೆ.

ಯುಎಸ್​​ನ ಹೊಸ ಅಧ್ಯಕ್ಷ ಜೋ ಬೈಡನ್
ಯುಎಸ್​​ನ ಹೊಸ ಅಧ್ಯಕ್ಷ ಜೋ ಬೈಡನ್

ಕಾಬೂಲ್: 2021ರ ಜನವರಿಯಲ್ಲಿ ಅಧಿಕಾರಕ್ಕೆ ಬರುವ ಯುಎಸ್​​ನ ಹೊಸ ಅಧ್ಯಕ್ಷ ಜೋ ಬೈಡನ್​ ಆಡಳಿತದೊಂದಿಗೆ ದೋಹಾ ಶಾಂತಿ ಒಪ್ಪಂದ ಮಾಡಿಕೊಳ್ಳುವುದಾಗಿ ತಾಲಿಬಾನ್​ ಹೇಳಿದೆ. ಅಲ್ಲದೇ ದಶಕಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಇದು ಮಹತ್ವದ ಮೈಲಿಗಲ್ಲು ಎಂದು ಅಫ್ಘಾನಿಸ್ತಾನ ಹೇಳಿದೆ.

ಯುಎಸ್ ಮತ್ತು ತಾಲಿಬಾನ್ ನಡುವಿನ ಒಪ್ಪಂದವೂ "ಯುಎಸ್ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸಲು ಅತ್ಯಂತ ಸಮಂಜಸವಾದ ಮತ್ತು ಪರಿಣಾಮಕಾರಿ ಸಾಧನವಾಗಿದೆ. ನಾವು ನಮ್ಮ ಕಡೆಯಿಂದ ಒಪ್ಪಂದಕ್ಕೆ ಬದ್ಧರಾಗಿದ್ದೇವೆ. ಈ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಸಿದ್ಧ. ಮಾತುಕತೆ ಮೂಲಕ ನಮ್ಮ ಆಂತರಿಕ ಸಮಸ್ಯೆಗಳನ್ನು ಪರಿಹರಿಸಲು ನಾವು ಆದ್ಯತೆ ನೀಡುತ್ತೇವೆ" ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ತಾಲಿಬಾನ್ ಫೆಬ್ರವರಿ 29 ರಂದು ಯುಎಸ್ ಜೊತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಪ್ರಕಾರ ಉಗ್ರಗಾಮಿ ಗುಂಪು ಅಫ್ಘಾನಿಸ್ತಾನದೊಳಗೆ ಅಮೆರಿಕದ ಪಡೆಗಳ ಮೇಲೆ ದಾಳಿ ಮಾಡುವಂತಿಲ್ಲ. ಶಾಂತಿ ಪ್ರಕ್ರಿಯೆಯ ಮಾಹಿತಿಯ ನಂತರ 14 ತಿಂಗಳೊಳಗೆ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಒಪ್ಪಂದಕ್ಕೂ ಈ ಒಪ್ಪಂದದ ಅಗತ್ಯವಿದೆ.

ದೇಶದಲ್ಲಿ ನಾಲ್ಕು ದಶಕಗಳ ಯುದ್ಧವನ್ನು ಕೊನೆಗೊಳಿಸುವ ಭರವಸೆಯೊಂದಿಗೆ ಸೆಪ್ಟೆಂಬರ್ 12 ರಂದು ದೋಹಾದಲ್ಲಿ ಶಾಂತಿ ಮಾತುಕತೆಗಳನ್ನು ಆರಂಭಿಸಲಾಯಿತು. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ ಮತ್ತು ತಾಲಿಬಾನ್ ಪ್ರತಿನಿಧಿಸುವ ನಾಯಕರು 10ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಆದರೆ ನೇರ ಮಾತುಕತೆ ಇನ್ನೂ ಪ್ರಾರಂಭವಾಗಬೇಕಿದೆ.

ದೋಹಾ ಒಪ್ಪಂದವನ್ನು ಬಿಡೆನ್ ಗೌರವಿಸಬೇಕು ಎಂದು ತಾಲಿಬಾನ್ ಹೇಳಿದೆ. ಎರಡು ದಿನಗಳ ನಂತರ ಈ ಹೇಳಿಕೆ ಬಂದಿದ್ದು, ಇದು ಒಬ್ಬ ವ್ಯಕ್ತಿಯೊಂದಿಗೆ ಅಲ್ಲ, ಆದರೆ ಅಮೆರಿಕದ ಸರ್ಕಾರದೊಂದಿಗೆ ಮಾಡಲ್ಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ABOUT THE AUTHOR

...view details