ಆಗ್ರಾ:ಆಗ್ರಾದಲ್ಲಿ 450ಕ್ಕೂ ಹೆಚ್ಚು ಪರವಾನಗಿ ಹೊಂದಿದ ಛಾಯಾಗ್ರಾಹಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಕಾರಣ ಅನ್ಲಾಕ್ 4.0 ಅಡಿಯಲ್ಲಿ ತಾಜ್ ಮಹಲ್ ತೆರೆಯಲು ನಿರ್ಧಾರ ಮಾಡಲಾಗಿದ್ದು, ಚೀನಾ, ತೈವಾನ್ನ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಭವ್ಯವಾದ ತಾಜ್ ವೀಕ್ಷಿಸಲು ಬಂದ ಪ್ರವಾಸಿಗರನ್ನು ಅವಲಂಬಿಸಿರುವ ಒಟ್ಟು ಛಾಯಾಗ್ರಾಹಕರು ಎಲ್ಲಾ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಅನುಸರಿಸುತ್ತಾರೆ. ಅವರಲ್ಲಿ ಎರಡು ಪಾಳಿಗಳಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತ್ತು ಇನ್ನೊಂದು ಮಧ್ಯಾಹ್ನ 12: 30 ರಿಂದ ಸೂರ್ಯಾಸ್ತದವರೆಗೆ ಕೆಲಸ ಮಾಡುತ್ತಾರೆ. ಇನ್ನು ಒಂದು ಸ್ಲಾಟ್‌ನಲ್ಲಿ ಸುಮಾರು 2,500 ಸಂದರ್ಶಕರಿಗೆ ಅವಕಾಶವಿದೆ ಎಂದು ತಿಳಿದುಬಂದಿದೆ.