ಆಗ್ರಾ:ದೇಶಾದ್ಯಂತ ಕೊರೊನಾ ಮಾಹಾಮಾರಿ ಹರಡುತ್ತಿದ್ದು, ಮುನ್ನಚ್ಚರಿಕಾ ಕ್ರಮವಾಗಿ ಉತ್ತರ ಪ್ರದೇಶ ಸರ್ಕಾರ ಮಾರ್ಚ್ 31 ರವರೆಗೆ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಸೇರಿದಂತೆ ಹಲವು ಪ್ರಮುಖ ಸ್ಮಾರಕಗಳನ್ನು ಮುಚ್ಚಲು ಆದೇಶಿಸಿದೆ.
ಸಹಾಯಕ ಸಂರಕ್ಷಣಾಧಿಕಾರಿ ಎಸ್. ಕೆ. ಶರ್ಮಾ ಮಾರ್ಚ್ 16 ರ ತಡರಾತ್ರಿ ಸರ್ಕಾರ ತನ್ನ ನಿರ್ಧಾರವನ್ನು ಘೋಷಿಸಿತ್ತು. ಆದರೆ. ಈ ವಿಷಯ ತಿಳಿಯದೇ, ಇಲ್ಲಿಗೆ ಆಗಮಿಸಿದ ವಿದೇಶಿಯರು ಸೇರಿದಂತೆ ಅನೇಕ ಪ್ರವಾಸಿಗರು ತಾಜ್ ಮಹಲ್ ನೋಡದೆ ನಿರಾಶೆಯಿಂದ ಹಿಂತಿರುಗಿದ ದೃಶ್ಯಗಳು ಕಂಡು ಬಂದವು.
ಕಳೆದ 49 ವರ್ಷಗಳಲ್ಲಿ ತಾಜ್‌ಮಹಲ್ ಮುಚ್ಚಿರುವುದು ಮೂರನೇ ಬಾರಿ. 1917ರಲ್ಲಿ ಮೊದಲ ಬಾರಿಗೆ 15 ದಿನಗಳ ಕಾಲ ಮತ್ತು 1978 ರಲ್ಲಿ ಪ್ರವಾಹ ಸಂಭವಿಸಿದ್ದ ವೇಳೆ ಮುಚ್ಚಲಾಗಿತ್ತು. ಈ ಕುರಿತಂತೆ 1971ರಲ್ಲಿ ಭಾರತದ ಪುರಾತತ್ವ ಸಮೀಕ್ಷೆಯ ಸಹಾಯಕ ಸಂರಕ್ಷಣಾಧಿಕಾರಿಯಾಗಿದ್ದ ಎಸ್. ಕೆ. ಶರ್ಮಾರವರು ತಮ್ಮ ತಾಜ್‌ಮಹಲ್ ಮುಚ್ಚುವಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
1971 ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಶತ್ರುಗಳು ನಡೆಸುವ ಬಾಂಬ್ ಸ್ಫೋಟದಿಂದ ರಕ್ಷಣೆ ಮಾಡಲು ತಾಜ್ ಮಹಲ್ 15 ದಿನಗಳ ಕಾಲ ಮೊದಲ ಬಾರಿಗೆ ಮುಚ್ಚಲಾಗಿತ್ತು. ವೈಮಾನಿಕ ನೋಟದಿಂದ ಅದನ್ನು ಮರೆಮಾಡಲಾಗಿತ್ತು. ಇನ್ನು 1978ರಲ್ಲಿ ಪ್ರವಾಹ ಬಂದಂತಹ ಸಮಯದಲ್ಲಿ ಸುಮಾರು 7 ದಿನಗಳ ಕಾಲ ಮುಚ್ಚಲಾಗಿತ್ತು ಎಂದರು.
ಆದರೆ, ಈ ಬಾರಿ 15 ದಿನಗಳ ಕಾಲ ತಾಜ್‌ಮಹಲ್ ಮುಚ್ಚುವುದರಿಂದ ಪ್ರವಾಸಿಗರಿಂದ ಆದಾಯ ನಷ್ಟವಾಗುವುದಲ್ಲದೇ, ಕೊರೊನಾ ವೈರಸ್ ಹೆದರಿಕೆಯಿಂದಾಗಿ ಸಾಮಾನ್ಯ ಜನರ ಜೀವನವೂ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.