ಕರ್ನಾಟಕ

karnataka

ETV Bharat / bharat

ಜುಲೈ 6ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ ಪ್ರೇಮ ಸೌಧ!

ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ಅನ್​ಲಾಕ್​ 2.0 ಜಾರಿಗೊಂಡಿದೆ. ಇದೀಗ ಕೆಲವೊಂದು ಪ್ರವಾಸಿ ಸ್ಥಳಗಳು ರೀ ಓಪನ್​ ಆಗ್ತಿದ್ದು, ಸಾರ್ವಜನಿಕರು ಭೇಟಿ ನೀಡಬಹುದಾಗಿದೆ.

Taj Mahal And Red Fort To Open
Taj Mahal And Red Fort To Open

By

Published : Jul 2, 2020, 6:40 PM IST

ನವದೆಹಲಿ:ಕೊರೊನಾ ಮಾಹಾಮಾರಿ ಹಾಗೂ ಲಾಕ್​ಡೌನ್​​ ಕಾರಣದಿಂದಾಗಿ ಕಳೆದ ಮೂರು ತಿಂಗಳಿಂದ ಬಂದ್​ ಆಗಿದ್ದ ವಿಶ್ವಪ್ರಸಿದ್ಧ ತಾಜ್​ಮಹಲ್​ ಹಾಗೂ ದೆಹಲಿಯ ಕೆಂಪು ಕೋಟೆ​​​​ ಬರುವ ಸೋಮವಾರ( ಜುಲೈ 6)ದಿಂದ ಮರು ಆರಂಭವಾಗಲಿವೆ.

ದೇಶಾದ್ಯಂತ ಲಾಕ್​ಡೌನ್ ಘೋಷಣೆ ಮಾಡುತ್ತಿದ್ದಂತೆ ಎಲ್ಲ ಪ್ರವಾಸಿ ಸ್ಥಳ, ಸ್ಮಾರಕಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗಾಗಲೇ ದೇವಸ್ಥಾನಗಳ ಭೇಟಿಗೆ ಅವಕಾಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇಶದಲ್ಲಿ ನಿನ್ನೆಯಿಂದ ಅನ್​ಲಾಕ್​​ 2.0 ಜಾರಿಗೊಂಡಿದ್ದು, ಅದರ ಪರಿಣಾಮವಾಗಿ ಕೆಲವೊಂದು ಪ್ರೇಕ್ಷಣಿಯ ಸ್ಥಳಗಳು ರೀ ಓಪನ್​ ಆಗುತ್ತಿವೆ. ಇದರ ಜತೆಗೆ ಮಧ್ಯಪ್ರದೇಶದ ಸಂಚಿಯ ಬೌದ್ಧ ಸ್ಮಾರಕ, ದೆಹಲಿಯ ಪುರಾತನ ಕ್ವಿಲಾ ಸೇರಿದಂತೆ ಕೆಲವೊಂದು ಐತಿಹಾಸಿಕ ಸ್ಥಳ ತೆರೆದುಕೊಳ್ಳಲಿವೆ. ಆದರೆ ದೇಶದಲ್ಲಿ ಶಾಲಾ-ಕಾಲೇಜು, ಮೆಟ್ರೋ ಸೇವೆ, ಸಿನಿಮಾ ಮಂದಿರ, ಸ್ವಿಮ್ಮಿಂಗ್​ ಫೂಲ್​, ಸಾರ್ವಜನಿಕ ಮದುವೆ ಹಾಲ್​ಗಳು ಬಂದ್​ ಇರಲಿವೆ.

ಪ್ರಧಾನಿ ನರೇಂದ್ರ ಮೋದಿ ಲಾಕ್​ಡೌನ್​ ಭಾಣಷಕ್ಕೂ 15 ದಿನ ಮುಂಚಿತವಾಗಿ ತಾಜ್​ಮಹಲ್​ ಸೇರಿದಂತೆ ದೇಶದ 3,400 ಕ್ಕೂ ಹೆಚ್ಚು ಸ್ಮಾರಕಗಳು ಬಂದ್​ ಆಗಿದ್ದವು.

ABOUT THE AUTHOR

...view details