ಕರ್ನಾಟಕ

karnataka

ETV Bharat / bharat

1,095 ಲುಕ್‌ಔಟ್ ನೋಟಿಸ್​ ಡಿಲೀಟ್... 630 ತಬ್ಲಿಘಿಗಳು ವಿದೇಶಕ್ಕೆ ವಾಪಸ್

ಆಯಾ ವಿದೇಶಿ ರಾಯಭಾರ ಕಚೇರಿಗಳ ಸಂಪರ್ಕ ಸಾಧಿಸಿ ತಬ್ಲಿಘಿ ಜಮಾತ್ ಸದಸ್ಯರನ್ನು ಸುಗಮವಾಗಿ ವಾಪಸ್ ಕಳುಹಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Tablighis Jamaat
1,095 ಲುಕ್‌ಔಟ್ ನೋಟಿಸ್​ ಡಿಲೀಟ್

By

Published : Aug 28, 2020, 8:53 AM IST

ನವದೆಹಲಿ:1,095 ಲುಕ್​​ಔಟ್ ನೋಟಿಸ್​ಗಳನ್ನು ತೆಗೆದುಹಾಕಲಾಗಿದೆ ಮತ್ತು ತಬ್ಲಿಘಿ ಜಮಾತ್‌ನ 630 ವಿದೇಶಿ ಸದಸ್ಯರು ಭಾರತವನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವೀಸಾ ನಿಯಮಗಳು ಮತ್ತು ಸಾಂಕ್ರಾಮಿಕ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿದೇಶದ ತಬ್ಲಿಘಿ ಜಮಾತ್ ಸದಸ್ಯರು ಭಾರತದಲ್ಲಿ ಸಿಲುಕಿಕೊಂಡಿರುವ ವಿಷಯದ ಬಗ್ಗೆ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ, ತಮ್ಮ ದೇಶಗಳಿಗೆ ಸುಗಮವಾಗಿ ವಾಪಸಾಗಲು ಸಚಿವಾಲಯ ಸಕ್ರಿಯವಾಗಿ ಅನುಕೂಲ ಕಲ್ಪಿಸುತ್ತಿದೆ ಎಂದು ಹೇಳಿದರು.

ನಾವು ಇಡೀ ಪ್ರಕ್ರಿಯೆ ಬಗ್ಗೆ ಆಯಾ ವಿದೇಶಿ ರಾಯಭಾರ ಕಚೇರಿಗಳಿಗೆ ತಿಳಿಸಿದ್ದೇವೆ. ಆಗಸ್ಟ್ 24 ರ ಹೊತ್ತಿಗೆ 1,095 ಲುಕ್‌ಔಟ್ ಸುತ್ತೋಲೆಗಳನ್ನು ಡಿಲೀಟ್ ಮಾಡಲಾಗಿದೆ ಮತ್ತು ತಬ್ಲಿಘಿ ಜಮಾತ್‌ನ 630 ವಿದೇಶಿ ಸದಸ್ಯರು ಭಾರತವನ್ನು ತೊರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಬ್ಲಿಘಿ ಜಮಾತ್‌ನ ಸದಸ್ಯರು ವೀಸಾ ಸ್ಥಿತಿಗೆ ಹೊರತಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ವಿದೇಶಿಯರ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details