ಕರ್ನಾಟಕ

karnataka

ETV Bharat / bharat

ತಬ್ಲಿಘಿ ಜಮಾತ್ ಪ್ರಕರಣ : 82 ಬಾಂಗ್ಲಾ ಪ್ರಜೆಗಳಿಗೆ ದೆಹಲಿ ಕೋರ್ಟ್‌ ಜಾಮೀನು - 82 ಬಾಂಗ್ಲಾದೇಶಿ ಪ್ರಜೆಗಳು

ವಿಚಾರಣೆಯ ಸಮಯದಲ್ಲಿ ಎಲ್ಲಾ ವಿದೇಶಿಯರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಮಂಗಳವಾರ 122 ಮಲೇಷಿಯನ್ನರಿಗೆ, 21 ದೇಶಗಳ 91 ವಿದೇಶಿಯರಿಗೆ ಹಾಗೂ ಎಂಟು ದೇಶಗಳ 76 ವಿದೇಶಿ ಪ್ರಜೆಗಳಿಗೆ ಗುರುವಾರ ಜಾಮೀನು ನೀಡಿತ್ತು..

ತಬ್ಲಿಘಿ ಜಮಾತ್ ಪ್ರಕರಣ
ತಬ್ಲಿಘಿ ಜಮಾತ್ ಪ್ರಕರಣ

By

Published : Jul 10, 2020, 5:06 PM IST

ನವದೆಹಲಿ :ವೀಸಾ ಮಾನದಂಡಗಳ ಉಲ್ಲಂಘನೆ ಮತ್ತು ತಬ್ಲಿಘಿ ಜಮಾತ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ 82 ಬಾಂಗ್ಲಾದೇಶದ ಪ್ರಜೆಗಳಿಗೆ ದೆಹಲಿ ಹೈಕೋರ್ಟ್​ ಶುಕ್ರವಾರ ಜಾಮೀನು ನೀಡಿದೆ.

ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗುರ್ಮೋಹಿನಾ ಕೌರ್ ವಿದೇಶಿಯರಿಗೆ ತಲಾ 10,000 ರೂ.ಗಳ ವೈಯಕ್ತಿಕ ಬಾಂಡ್ ನೀಡುವ ಮೂಲಕ ಜಾಮೀನು ನೀಡಿದರು. ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಪಡೆದ 31 ವಿವಿಧ ದೇಶಗಳ 371 ವಿದೇಶಿ ಪ್ರಜೆಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಈ ಪ್ರಕರಣದಲ್ಲಿ 36 ವಿವಿಧ ದೇಶಗಳಿಗೆ ಸೇರಿದ 956 ವಿದೇಶಿಯರ ವಿರುದ್ಧ ಪೊಲೀಸರು ಜೂನ್‌ನಲ್ಲಿ ಪೂರಕ ಸೇರಿ 59 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದರು. ಶುಕ್ರವಾರ ಜಾಮೀನು ಪಡೆದ ಆರೋಪಿಗಳು ತಮ್ಮ ಬಾರ್​ಗೇನಿಂಗ್​​ ಅರ್ಜಿಯನ್ನು ಶನಿವಾರ ಸಲ್ಲಿಸಲಿದ್ದಾರೆ ಎಂದು ವಕೀಲರಾದ ಅಶಿಮಾ ಮಂಡ್ಲಾ, ಮಂಡಕಿನಿ ಸಿಂಗ್ ಮತ್ತು ಫಾಹಿಮ್ ಖಾನ್ ಅವರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಎಲ್ಲಾ ವಿದೇಶಿಯರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಮಂಗಳವಾರ 122 ಮಲೇಷಿಯನ್ನರಿಗೆ, 21 ದೇಶಗಳ 91 ವಿದೇಶಿಯರಿಗೆ ಹಾಗೂ ಎಂಟು ದೇಶಗಳ 76 ವಿದೇಶಿ ಪ್ರಜೆಗಳಿಗೆ ಗುರುವಾರ ಜಾಮೀನು ನೀಡಿತ್ತು.

ಈ ಪ್ರಕರಣದ 956 ವಿದೇಶಿಯರ ವಿರುದ್ಧ ತನಿಖೆ ಪೂರ್ಣಗೊಂಡಿದೆ. ಪ್ರತಿಯೊಬ್ಬರೂ ಸ್ವತಂತ್ರವಾಗಿ ಅಪರಾಧವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಅಂತಾ ತನಿಖಾ ಅಧಿಕಾರಿ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಹೆಚ್ಚಿನ ತನಿಖೆ ಬಾಕಿ ಇದೆ ಎಂದು ಐಒ ತಿಳಿಸಿದೆ.

ABOUT THE AUTHOR

...view details