ಭೋಪಾಲ್(ಮಧ್ಯಪ್ರದೇಶ): ಮಾರ್ಚ್‌ನಲ್ಲಿ ಕೊರೊನಾ ನಡುವೆ ದೆಹಲಿ ಮತ್ತು ಭೋಪಾಲ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕಾಗಿ ಇಲ್ಲಿನ ಸ್ಥಳೀಯ ಕೋರ್ಟ್ ಕಿರ್ಗಿಸ್ತಾನ್‌ದ 12 ತಬ್ಲಿಘಿ ಜಮಾತ್ ಸದಸ್ಯರಿಗೆ ತಲಾ 6,000 ರೂ. ದಂಡ ವಿಧಿಸಿದೆ.
ನಿಯಮ ಉಲ್ಲಂಘಿಸಿದ ತಬ್ಲಿಘಿಗಳಿಗೆ ದಂಡ: ಭೋಪಾಲ್ ಕೋರ್ಟ್ ಆದೇಶ
ಕೊರೊನಾ ನಡುವೆ ದೆಹಲಿ ಮತ್ತು ಭೋಪಾಲ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕಾಗಿ ಭೋಪಾಲ್ನ ಸ್ಥಳೀಯ ಕೋರ್ಟ್ ಕಿರ್ಗಿಸ್ತಾನ್‌ದ 12 ತಬ್ಲಿಘಿ ಜಮಾತ್ ಸದಸ್ಯರಿಗೆ ತಲಾ 6,000 ರೂ. ದಂಡ ವಿಧಿಸಿದೆ.
ಭೋಪಾಲ್ ಕೋರ್ಟ್ ಆದೇಶ
ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿ ಇಂಡೋನೇಷ್ಯಾದ 12 ಮಂದಿಗೆ ತಲಾ 12 ಸಾವಿರ ರೂ. ದಂಡವನ್ನ ಭೋಪಾಲ್ನ ಇನ್ನೊಂದು ನ್ಯಾಯಾಲಯ ವಿಧಿಸಿದೆ.
ಕಳೆದ ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿ ಪ್ರಜೆಗಳಿಗೆ ಆಗಸ್ಟ್ 6ರಂದು ಸುಪ್ರೀಂಕೋರ್ಟ್ ದೇಶವನ್ನು ತೊರೆಯುವ ಮೊದಲು ಸಾಲಿಸಿಟರ್ ಜನರಲ್ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಿತ್ತು. ಇವರ ವಿರುದ್ಧದ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.