ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ದೇಶದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನೈರುತ್ವ ರೈಲ್ವೆ ವಿಭಾಗವು ತನ್ನ ಸಿಬ್ಬಂದಿಗೆ ಅಗತ್ಯವಿರುವ ಮಾಸ್ಕ್ ಹಾಗೂ ಸ್ಯಾನಿಟೈಜರ್ಗಳನ್ನು ತಾನೇ ತಯಾರಿಸಿಕೊಳ್ಳುತ್ತಿದೆ. ಈಗಾಗಲೇ 7,295 ಮಾಸ್ಕ್ ಹಾಗೂ 1,200 ಲೀಟರ್ ಸ್ಯಾನಿಟೈಜರ್ ತಯಾರಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
7,295 ಮಾಸ್ಕ್, 1,200 ಲೀ. ಸ್ಯಾನಿಟೈಜರ್ ತಯಾರಿಸಿದ ನೈರುತ್ಯ ರೈಲ್ವೆ - ಅಲೋವೆರಾ ಜೆಲ್
ನೈರುತ್ವ ರೈಲ್ವೆ ವಿಭಾಗವು ತನ್ನ ಸಿಬ್ಬಂದಿಗೆ ಅಗತ್ಯವಿರುವ ಮಾಸ್ಕ್ ಹಾಗೂ ಸ್ಯಾನಿಟೈಜರ್ಗಳನ್ನು ತಾನೇ ತಯಾರಿಸಿಕೊಳ್ಳುತ್ತಿದೆ. ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ವಯ ಸರ್ಜಿಕಲ್ ಸ್ಪಿರಿಟ್, ಅಲೋವೆರಾ ಜೆಲ್, ಗ್ಲೀಸೆರಾಲ್ ಮತ್ತು ಸೆಂಟ್ ಬಳಸಿ ಸ್ಯಾನಿಟೈಜರ್ ತಯಾರಿಸಲಾಗಿದೆ. ರೈಲ್ವೆಯ ಹೊಲಿಗೆ ವಿಭಾಗದಲ್ಲಿ ಹತ್ತಿಯ ಬಟ್ಟೆ ಉಪಯೋಗಿಸಿ ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ.
SWR chips in with 7,295 masks, 1,200 litres of sanitiser
ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ವಯ ಸರ್ಜಿಕಲ್ ಸ್ಪಿರಿಟ್, ಅಲೋವೆರಾ ಜೆಲ್, ಗ್ಲೀಸೆರಾಲ್ ಮತ್ತು ಸೆಂಟ್ ಬಳಸಿ ಸ್ಯಾನಿಟೈಜರ್ ತಯಾರಿಸಲಾಗಿದೆ. ರೈಲ್ವೆಯ ಹೊಲಿಗೆ ವಿಭಾಗದಲ್ಲಿ ಹತ್ತಿಯ ಬಟ್ಟೆ ಉಪಯೋಗಿಸಿ ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ.
"ವೈದ್ಯಕೀಯ ಸಲಕರಣೆಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸ್ವತಃ ಮಾಸ್ಕ್ ಹಾಗೂ ಸ್ಯಾನಿಟೈಜರ್ ತಯಾರಿಸುತ್ತಿದೆ. ಲಾಕ್ಡೌನ್ನ ಈ ಸಂದರ್ಭದಲ್ಲಿ ಇದರಿಂದ ಸಿಬ್ಬಂದಿಗೆ ಅನುಕೂಲವಾಗಲಿದೆ." ಎಂದು ನೈರುತ್ಯ ರೈಲ್ವೆಯ ವಕ್ತಾರ ಹೇಳಿದರು.