ಅಮರಾವತಿ (ಆಂಧ್ರ ಪ್ರದೇಶ):ಆನ್‌ಲೈನ್ ಮೂಲಕ ಆಹಾರ ವಿತರಣೆ ಮಾಡುವ ಸ್ವಿಗ್ಗಿ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮನೆ ಬಾಗಿಲಿಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಲುಪಿಸಲಿದೆ.
ಆಂಧ್ರದಲ್ಲಿ ತರಕಾರಿ-ಹಣ್ಣುಗಳನ್ನೂ ಮನೆ ಬಾಗಿಲಿಗೆ ತರುತ್ತೆ ಸ್ವಿಗ್ಗಿ - ಸ್ವಿಗ್ಗಿ ಲೇಟೆಸ್ಟ್ ನ್ಯೂಸ್
ಆಂಧ್ರ ಪ್ರದೇಶದ ಕೃಷಿ ಮಾರುಕಟ್ಟೆ ಇಲಾಖೆಯ ಸಹಭಾಗಿತ್ವದಲ್ಲಿ ಸ್ವಿಗ್ಗಿ, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ.
ಲಾಕ್ಡೌನ್ನಂತ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಆಂಧ್ರ ಸರ್ಕಾರಕ್ಕೆ ಸ್ವಿಗ್ಗಿ ಕಂಪನಿ ಧನ್ಯವಾದ ಅರ್ಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಿಗ್ಗಿ, ಕಠಿಣ ಸಮಯದಲ್ಲಿ ಆಂಧ್ರ ಪ್ರದೇಶ ಗ್ರಾಹಕರಿಗೆ ಸೇವೆ ಸಲ್ಲಿಸಲು ನಮಗೆ ಅವಕಾಶವನ್ನು ಒದಗಿಸಿದ್ದಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್, ಕೋವಿಡ್-19 ವಿಶೇಷ ಅಧಿಕಾರಿಗಳಿಗೆ ಧನ್ಯವಾದಗಳು. ಆಂಧ್ರದ ಇ-ಪಾಸ್ ವ್ಯವಸ್ಥೆಯು ಬಳಕೆದಾರರ ಸ್ನೇಹಿಯಾಗಿದೆ' ಎಂದಿದೆ.
ಶೀಘ್ರದಲ್ಲೇ ನಾವು ಆಂಧ್ರ ಪ್ರದೇಶದ ಕೃಷಿ ಮಾರುಕಟ್ಟೆ ಇಲಾಖೆಯ ಸಹಭಾಗಿತ್ವದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದ್ದೇವೆ. ಹೀಗಾಗಿ ನೀವು ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಿ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.