ಕರ್ನಾಟಕ

karnataka

ETV Bharat / bharat

ರಾಜಸ್ಥಾನದ ಗಡಿಯಲ್ಲಿ ಶಂಕಿತ ಪಾರಿವಾಳ ಪತ್ತೆ

ರಾಜಸ್ಥಾನದ ಶ್ರೀಗಂಗಾನಗರದ ಇಂಡೋ-ಪಾಕ್​ ಬಾರ್ಡರ್​ನಲ್ಲಿ ಅನುಮಾನಸ್ಪದ ಪಾರಿವಾಳವೊಂದು ಕಾಣಿಸಿಕೊಂಡಿದ್ದು, ಅದರ ಕಾಲುಗಳಲ್ಲಿ ವೃತ್ತಾಕಾರದ ಹಸಿರು ಉಂಗುರ ಕಂಡುಬಂದಿದೆ. ಅಲ್ಲದೆ, ಅದರ ಮೇಲೆ ಕೆಲವು ಸಂಖ್ಯೆಗಳನ್ನು ಬರೆಯಲಾಗಿದ್ದು, ಪಾರಿವಾಳದೊಂದಿಗೆ ಬೇರೆ ಯಾವುದೇ ಸಾಧನ ಅಥವಾ ವಸ್ತು ಪತ್ತೆಯಾಗಿಲ್ಲ.

Suspicious pigeon captured in Rajasthan's Sri Ganganagar
ರಾಜಸ್ಥಾನದಲ್ಲಿ ಗಡಿಯಲ್ಲಿ ಶಂಕಿತ ಪಾರಿವಾಳ ಪತ್ತೆ..!

By

Published : May 31, 2020, 10:36 PM IST

ಶ್ರೀಗಂಗಾನಗರ (ರಾಜಸ್ಥಾನ): ರಾಜಸ್ಥಾನದ ಶ್ರೀಗಂಗಾನಗರದ ಇಂಡೋ-ಪಾಕ್​ ಗಡಿಯಲ್ಲಿ ಅನುಮಾನಸ್ಪದ ಪಾರಿವಾಳವೊಂದು ಕಂಡುಬಂದಿದೆ.

ಈ ಪಾರಿವಾಳವನ್ನ ಮೊದಲು ಗುರುತಿಸಿದ ಗ್ರಾಮಸ್ಥರು, ಬಿಎಸ್‌ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ ಬಿಎಸ್​ಎಫ್​ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಪಾರಿವಾಳದ ಕಾಲುಗಳಲ್ಲಿ ವೃತ್ತಾಕಾರದ ಹಸಿರು ಉಂಗುರ ಕಂಡುಬಂದಿದೆ. ಅಲ್ಲದೆ, ಅದರ ಮೇಲೆ ಕೆಲವು ಸಂಖ್ಯೆಗಳನ್ನು ಬರೆಯಲಾಗಿದ್ದು, ಪಾರಿವಾಳದೊಂದಿಗೆ ಬೇರೆ ಯಾವುದೇ ಸಾಧನ ಅಥವಾ ವಸ್ತು ಕಂಡುಬಂದಿಲ್ಲ.

ಬಿಎಸ್ಎಫ್ ಅಧಿಕಾರಿಗಳು ಆರೋಗ್ಯ ಪರೀಕ್ಷೆ ನಡೆಸಿದ ನಂತರ ಹೆಚ್ಚಿನ ಪರಿಶೀಲನೆಗಾಗಿ ಪಾರಿವಾಳವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪಾರಿವಾಳದ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.

ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಭಾರತ-ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯ ಸಮೀಪವಿದ ಮಾನ್ಯಾರಿಯಲ್ಲಿ ಇದೇ ರೀತಿಯ ಪಾರಿವಾಳವವೊಂದು ಕಾಣಿಸಿತ್ತು.

ABOUT THE AUTHOR

...view details