ಕರ್ನಾಟಕ

karnataka

ETV Bharat / bharat

ದೆಹಲಿ ವಿಮಾನ ನಿಲ್ದಾಣದಲ್ಲಿ ಆರ್​​ಡಿಎಕ್ಸ್​ ಪತ್ತೆ: ಹೈ ಅಲರ್ಟ್​ - delhi airport RDX

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ 3 ರಲ್ಲಿ ಅನುಮಾನಾಸ್ಪದ ಬ್ಯಾಗ್​ವೊಂದು ಪತ್ತೆಯಾಗಿತ್ತು. ಶಂಕಿತ  ಬ್ಯಾಗ್​​ ಅನ್ನು ವಶಕ್ಕೆ ಪಡೆದ ಪೊಲೀಸರು, ಆರ್​ಡಿಎಕ್ಸ್​ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಆರ್​​ಡಿಎಕ್ಸ್​ ಪತ್ತೆ

By

Published : Nov 1, 2019, 10:21 AM IST

Updated : Nov 1, 2019, 3:02 PM IST

ನವದೆಹಲಿ:ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​ 3 ರಲ್ಲಿ ಅನುಮಾನಾಸ್ಪದ ಬ್ಯಾಗ್​ವೊಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶಂಕಿತ ಬ್ಯಾಗ್​​ ಅನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ಪೊಲೀಸ್​ ತಪಾಸಣಾ ದಳ ಈ ಬ್ಯಾಗ್​ ಪರಿಶೀಲನೆ ನಡೆಸಿತ್ತು. ಈ ಬ್ಯಾಗ್​ನಲ್ಲಿ ಅಪಾಯಕಾರಿ ಆರ್​ಡಿಎಕ್ಸ್​ ಇರುವುದು ಪತ್ತೆಯಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ತಡರಾತ್ರಿ 3 ಗಂಟೆ ಸುಮಾರಿಗೆ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸರಿಗೆ ಕರೆಯೊಂದು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಟರ್ಮಿನಲ್​ ಮೂರನ್ನು ಪ್ರಯಾಣಿಕರಿಗೆ ನಿರ್ಬಂಧಿಸಿತ್ತು. ಇನ್ನು ಟರ್ಮಿನನಲ್​ 3 ರ ರಸ್ತೆಗಳನ್ನು ಸಹ ಬಂದ್​ ಮಾಡಲಾಗಿತ್ತು.

Last Updated : Nov 1, 2019, 3:02 PM IST

ABOUT THE AUTHOR

...view details