ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರನೋರ್ವನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ಬಸವನಗುಡಿಯಲ್ಲಿ ಬಂಧಿಸಿದ್ದಾರೆ.
ಅಬ್ದುಲ್ ರೆಹಮಾನ್ ಬಂಧಿತ ಶಂಕಿತ ಉಗ್ರ. ಈತ ಇಸ್ಲಾಮಿಕ್ ಸ್ಟೇಟ್ ಆಫ್ ಖೊರೋಸನ್ ಪ್ರಾವಿನ್ಸ್-ಐಎಸ್ಕೆಪಿ (Islamic State of Khorasan Province-ISKP) ಸಂಘಟನೆ ಸೇರಿದ್ದ ಎಂದು ಮೂಲಗಳು ತಿಳಿಸಿವೆ.
ಕೆಲಸ ಮಾಡುತ್ತಲೇ ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಈತ ಬಾಂಗ್ಲಾ ಮೂಲದ ನಿಷೇಧಿತ ಐಎಸ್ಕೆಪಿ ಸಂಘಟನೆ ಸದಸ್ಯನಾಗಿದ್ದ. ಇದರ ಜೊತೆಗೆ ತಿಹಾರ್ ಜೈಲಿನಲ್ಲಿರುವ ಅಬ್ದುಲ್ ಬಸೀತ್ ಎಂಬ ಉಗ್ರನ ಜೊತೆ ಈತನಿಗೆ ನಂಟಿದ್ದು, ಪುಣೆ ಮೂಲದ ಸಾದಿಯಾ ಅನ್ವರ್, ನಬೀಲ್ ಸಿದ್ಧಿಕಿ ಖತ್ರಿ ಜೊತೆಗೂ ಕೂಡಾ ಸಂಪರ್ಕ ಹೊಂದಿರುವುದು ಗೊತ್ತಾಗಿದೆ.