ಕರ್ನಾಟಕ

karnataka

ETV Bharat / bharat

ಪಾಕ್​ನಿಂದ ಹಾರಿ ಬಂತು​ ಶಂಕಿತ ಬೇಹುಗಾರಿಕಾ ಪಾರಿವಾಳ... ಕೋಡ್​ ವರ್ಡ್​ ಹಿಂದೆ ಬಿದ್ದ ಪೊಲೀಸರು!

ಭಾರತದಲ್ಲಿ ಬೇಹುಗಾರಿಕೆ ನಡೆಸಲು ಪಾಕ್​ನಿಂದ ಬಂದಿದ್ದು ಎನ್ನಲಾದ ಪಾರಿವಾಳವನ್ನು ಕಾಶ್ಮೀರದ ಜನತೆ ಹಿಡಿದಿದ್ದಾರೆ. ಬೇಹುಗಾರಿಕೆ ಶಂಕೆ ಹಿನ್ನೆಲೆ ಪೊಲೀಸರು ಇದನ್ನು ವಶಕ್ಕೆ ಪಡೆದಿದ್ದಾರೆ.

Suspected 'spy' pigeon from Pakistan
ಶಂಕಿತ ಪಾಕ್​ ಬೇಹುಗಾರಿಕಾ ಪಾರಿವಾಳ ವಶಕ್ಕೆ

By

Published : May 25, 2020, 4:48 PM IST

Updated : May 25, 2020, 7:20 PM IST

ಕಥುವಾ(ಜಮ್ಮು ಕಾಶ್ಮೀರ):ಬೇಹುಗಾರಿಕೆಗಾಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿರಬಹುದೆಂದು ಶಂಕಿಸಲಾಗಿರುವ ಪಾರಿವಾಳವನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್​ನಿಂದ ಹಾರಿ ಬಂತು​ ಶಂಕಿತ ಬೇಹುಗಾರಿಕಾ ಪಾರಿವಾಳ

ಕೋಡೆಡ್ ಸಂದೇಶವನ್ನು ಹೊಂದಿರುವ ಪಾರಿವಾಳ ಪಾಕಿಸ್ತಾನದಿಂದ ಈ ಕಡೆಗೆ ಹಾರಿದ ಕೂಡಲೇ ಹಿರಾನಗರ ಸೆಕ್ಟರ್‌ನ ಮಾನ್ಯರಿ ಗ್ರಾಮದ ನಿವಾಸಿಗಳು ಸೆರೆಹಿಡಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರು ನಿನ್ನೆ ಪಾರಿವಾಳವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಅದರ ಒಂದು ಕಾಲಿಗೆ ಕೆಲವು ಸಂಖ್ಯೆಗಳನ್ನು ಹೊಂದಿರುವ ರಿಂಗ್ ಜೋಡಿಸಲಾಗಿದೆ. ಕೋಡ್​ವರ್ಡ್​ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಸಂಬಂಧಪಟ್ಟ ಭದ್ರತಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕಥುವಾ ಹಿರಿಯ ಪೊಲೀಸ್ ವರಿಷ್ಟಾಧಿಕಾರಿ ಶೈಲೇಂದ್ರ ಮಿಶ್ರಾ ತಿಳಿಸಿದ್ದಾರೆ.

Last Updated : May 25, 2020, 7:20 PM IST

ABOUT THE AUTHOR

...view details