ವರಂಗಲ್ (ತೆಲಂಗಾಣ): ಮಹಿಳೆಯೊಬ್ಬರ ಮೃತದೇಹವನ್ನು ಇಲ್ಲಿನ ಸರ್ಕಾರಿ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆ (ಎಂಜಿಎಂ)ಯ ಅಪಘಾತ ವಾರ್ಡ್ನ ಹೊರಗೆ ಬಿಟ್ಟಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯ ಮೃತದೇಹ ಆಸ್ಪತ್ರೆ ಹೊರಗೆ ಬಿಟ್ಟು ಅಮಾನವೀಯತೆ ಮೆರೆದ ಹಾಸ್ಪಿಟಲ್ - ತೆಲಂಗಾಣ ಸುದ್ದಿ
"ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಯೊಬ್ಬರನ್ನು ಎಂಜಿಎಂ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ರೋಗಿ ಸಾವನ್ನಪ್ಪಿದ್ದಾರೆ. ಅವರಿಗೆ ಕೋವಿಡ್-19 ಇರಲೂಬಹುದು. ಆಕೆಯ ಕುಟುಂಬ ಸದಸ್ಯರು ಮೃತ ದೇಹವನ್ನು ತೆಗೆದುಕೊಂಡು ಆಸ್ಪತ್ರೆಯಿಂದ ಹೋಗಿದ್ದಾರೆ ಎಂದು ಹಾಸ್ಪಿಟಲ್ನ ಅಧೀಕ್ಷಕ ಡಾ.ಶ್ರೀನಿವಾಸ್ ರೈ ಹೇಳಿದ್ದಾರೆ.
ಮೃತ ಮಹಿಳೆಯು ಕೋವಿಡ್ನಿಂದ ಮೃತಪಟ್ಟಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಮಹಿಳೆಯ ಕುಟುಂಬದವರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವವರೆಗೂ ಆಸ್ಪತ್ರೆ ಸಿಬ್ಬಂದಿ ಶವವನ್ನು ಶವಾಗಾರದಲ್ಲೂ ಇಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಜಿಎಂ ಆಸ್ಪತ್ರೆಯ ಅಧೀಕ್ಷಕ ಡಾ.ಶ್ರೀನಿವಾಸ್ ರೈ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಯೊಬ್ಬರನ್ನು ಹನುಮಕೊಂಡದಿಂದ ಎಂಜಿಎಂ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ರೋಗಿ ಸಾವನ್ನಪ್ಪಿದ್ದಾರೆ. ಅವರಿಗೆ ಕೋವಿಡ್-19 ಇರಲೂಬಹುದು. ಆಕೆಯ ಕುಟುಂಬ ಸದಸ್ಯರು ಮೃತ ದೇಹವನ್ನು ತೆಗೆದುಕೊಂಡು ಆಸ್ಪತ್ರೆಯಿಂದ ಹೋಗಿದ್ದಾರೆ ಎಂದಿದ್ದಾರೆ.