ಕರ್ನಾಟಕ

karnataka

ETV Bharat / bharat

ಸೋನಿಯಾಗೆ ಪ್ರಬಲ ಸ್ಪರ್ಧೆಯೊಡ್ಡಿ ಬಳ್ಳಾರಿಗೆ ಸ್ಟಾರ್​ ವ್ಯಾಲ್ಯೂ ತಂದಿದ್ದ ಸುಷ್ಮಾ - ಬಳ್ಳಾರಿ

1952 ರಿಂದ 1999ರ ವರೆಗೂ ಬಳ್ಳಾರಿ ಕಾಂಗ್ರೆಸಿನ ಭದ್ರ ಕೋಟೆಯಾಗಿತ್ತು. ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಮೇಲೆ ಬಳ್ಳಾರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಟಾರ್ ವ್ಯಾಲ್ಯೂ ಬಂದಿತ್ತು.

ಸಾಂದರ್ಭಿಕ ಚಿತ್ರ

By

Published : Aug 6, 2019, 11:49 PM IST

ನವದೆಹಲಿ:ಮಾಜಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​​ (67) ಅವರು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

1952 ರಿಂದ 1999ರ ವರೆಗೂ ಬಳ್ಳಾರಿ ಕಾಂಗ್ರೆಸಿನ ಭದ್ರ ಕೋಟೆಯಾಗಿತ್ತು. ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಮೇಲೆ ಬಳ್ಳಾರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಟಾರ್ ವ್ಯಾಲ್ಯೂ ಬಂದಿತ್ತು.

1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಬಿಜೆಪಿಯಿಂದ ಸುಷ್ಮಾ ಸ್ವರಾಜ್‌ ಸ್ಪರ್ಧಿಸಿ, ಬಳ್ಳಾರಿ ದೇಶಾದ್ಯಂತ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಸೋನಿಯಾ ಗಾಂಧಿ ಅವರು 56,100 ಮತಗಳ ಅಂತರದಿಂದ ಸುಷ್ಮಾ ಸ್ವರಾಜ್‌ ವಿರುದ್ಧ ವಿಜಯಶಾಲಿಯಾಗಿದ್ದರು.

ರೆಡ್ಡಿ ಸಹೋದರರು ಪ್ರವರ್ಧಮಾನಕ್ಕೆ ಬಂದಿದ್ದು ಹಾಗೂ ಬಳ್ಳಾರಿ ಜಿಲ್ಲೆ ಭದ್ರಕೋಟೆಯಾಗಿದ್ದೇ ಸುಷ್ಮಾ ಸ್ವರಾಜ್​ ಬಳ್ಳಾರಿಯಿಂದ ಸ್ಪರ್ಧೆಗಿಳಿದಾಗ.. ಅಲ್ಲಿಂದ ಮುಂದೆ ಆಗಿದ್ದು ಕಮಾಲ್​ 2008 ರಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದ್ದು ಮುಂದೆ ಇತಿಹಾಸ.

ಹೀಗಾಗಿ ಸುಷ್ಮಾ ಹಾಗೂ ಕರ್ನಾಟಕಕ್ಕೆ ದೊಡ್ಡ ನಂಟೇ ಇದೆ. ಬಳ್ಳಾರಿಗೆ ಪ್ರತಿವರ್ಷ ವರ ಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿದ್ದ ಸ್ವರಾಜ್​ ರಾಜ್ಯದಲ್ಲಿ ತುಂಬಾ ಹೆಸರು ಮಾಡಿದ್ದರು.

ABOUT THE AUTHOR

...view details