ನವದೆಹಲಿ :ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಬಾಲಕಿಯರನ್ನು ಅಪಹರಿಹಿಸಿ, ಬಲವಂತದ ಮತಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಈಗಭಾರತ-ಪಾಕ್ ಮುಂದಾಗಿವೆ.
ಪ್ರಕರಣ ಸಂಬಂಧ ಮಾಹಿತಿ ಒದಗಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕ್ನಲ್ಲಿರುವ ಭಾರತೀಯ ಹೈ-ಕಮೀಷನರನ್ನು ಕೇಳಿದ್ದಾರೆ. ಶೀಘ್ರವೇ ಅಗತ್ಯ ಮಾಹಿತಿ ನೀಡುವುದಾಗಿ ಭಾರತೀಯ ಹೈ-ಕಮೀಷನರ್ ಹೇಳಿದ್ದಾರೆ.
ಅತ್ತ ವಿಷಯದ ಗಂಭೀರತೆ ಅರಿತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿದೆ ಸೂಚಿಸಿದ್ದಾರೆ. ಪಾಕ್ನ ಮಾಹಿತಿ ಸಚಿವ ಫವಾದ್ ಚೌಧರಿ, ಸಿಂಧ್ನ ಮುಖ್ಯಮಂತ್ರಿಗೆ ಮಾಹಿತಿ ಒದಗಿಸುವಂತೆ ಕೇಳಿದ್ದಾರೆ. ಸಿಂಧ್ ಹಾಗೂ ಪಂಜಾಬ್ ಸರ್ಕಾರಗಳೆರಡೂ ಸೇರಿ ಘಟನೆ ಬಗ್ಗೆ ಜಂಟಿ ಕ್ರಮ ಕೈಗೊಳ್ಳಬೇಕಿದೆ ಎಂದೂ ಪ್ರಧಾನಿ ಹೇಳಿದ್ದಾರೆ.
ಹೋಳಿ ಹಬ್ಬದ ದಿನದಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗೋಟ್ಕಿ ಜಿಲ್ಲೆಯ ರವೀನಾ ಹಾಗೂ ರೀನಾ (ಹೆಸರು ಬದಲಿಸಿದೆ) ಎಂಬ ಇಬ್ಬರು ಬಾಲಕಿಯರನ್ನು ಅಪಹರಿಸಿ, ಅನ್ಯ ಕೋಮಿಗೆ ಮತಾಂತರ ಮಾಡಲಾಗಿದೆ ಎಂದು ಮಾಹಿತಿ ಹರಡಿತ್ತು. ಮತಾಂತರದ ನಂತರ ಬಾಲಕಿಯರಿಬ್ಬರ ಮದುವೆ ನಡೆಯಿತು ಎಂಬ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇಬ್ಬರೂ ಒಪ್ಪಿಯೇ ಮದುವೆಯಾಗಿದ್ದು, ಬಲವಂತವಾಗಿ ಮತಾಂತರ ಮಾಡಿಲ್ಲ ಎಂದು ಬಾಲಕಿಯರೇ ಹೇಳಿದ ವಿಡಿಯೋ ಸಹ ಹರಿದಾಡುತ್ತಿದೆ.