ಕರ್ನಾಟಕ

karnataka

ETV Bharat / bharat

ಸುಶಾಂತ್ ಸಿಂಗ್​ ರಜಪೂತ್​ ಸಹೋದರಿ ರಕ್ಷಾಬಂಧನ ಆಚರಿಸಿದ್ದು ಹೀಗೆ.. - ಶ್ವೇತಾ ಸಿಂಗ್ ಕೀರ್ತಿ

ಸುಶಾಂತ್ ಸಿಂಗ್​ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತನ್ನ ಸಹೋದರನನ್ನು ನೆನೆದು ಇನ್ಸ್​ಟಾಗ್ರಾಂನಲ್ಲಿ ರಕ್ಷಾಬಂಧನದ ಶುಭಕೋರಿದ್ದಾರೆ.

Sushant  sister
ಸುಶಾಂತ್ ಸಿಂಗ್​ ರಜಪೂತ್​ ಸಹೋದರಿ

By

Published : Aug 3, 2020, 4:36 PM IST

Updated : Aug 3, 2020, 5:00 PM IST

ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ತನ್ನ ರಕ್ಷಾಬಂಧನದ ದಿನದಂದು ತನ್ನ ಸಹೋದರನನ್ನು ನೆನಪಿಸಿಕೊಂಡು ರಕ್ಷಾಬಂಧನದ ಶುಭ ಕೋರಿದ್ದಾರೆ.

ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತನ್ನ ಸಹೋದರನ್ನು ನೆನೆದು ಇನ್ಸ್​ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಹಾಗೂ ಇತ್ತೀಚಿನ ಫೋಟೋಗಳನ್ನು ಕೊಲೇಜ್​​ ಮಾಡಿ ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯದ ಫೋಟೋದಲ್ಲಿ ನಾಲ್ವರು ಸಹೋದರಿಯರೊಂದಿಗೆ ಸುಶಾಂತ್ ರಾಖಿ ಕಟ್ಟಿಸಿಕೊಳ್ಳುತ್ತಿದ್ದು, ಇತ್ತೀಚಿನ ಫೋಟೋದಲ್ಲಿ ಕೀರ್ತಿ ಹಾಗೂ ಸುಶಾಂತ್ ಜೊತೆಯಲ್ಲಿದ್ದಾರೆ.

ಇದರ ಜೊತೆಗೆ ''ನನ್ನ ಮುದ್ದು ಕಂದನಿಗೆ ರಕ್ಷಾಬಂಧನದ ಶುಭಾಶಯ. ನಾವು ನಿನ್ನನ್ನು ಹೆಚ್ಚು ಪ್ರೀತಿಸುತ್ತೇವೆ. ನೀನು ನನಗೆ ಯಾವಾಗಲೂ ಹೆಮ್ಮೆ'' ಎಂದು ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಶ್ವೇತಾ ಸಿಂಗ್ ಕೀರ್ತಿ ಶನಿವಾರ ಸುಶಾಂತ್​ ಸಿಂಗ್​ ಸಾವಿಗೆ ನ್ಯಾಯ ಒದಗಿಸಬೇಕೆಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದರು. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಆಗಾಗ ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಬರೆದುಕೊಳ್ಳುತ್ತಿದ್ದರು.

ಈಗ ಸುಶಾಂತ್ ಸಾವಿಗೀಡಾಗಿ ಸುಮಾರು ಒಂದೂವರೆ ತಿಂಗಳು ಕಳೆದಿದ್ದು, ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ.

Last Updated : Aug 3, 2020, 5:00 PM IST

ABOUT THE AUTHOR

...view details