ಪಾಟ್ನಾ:ನಟ ಸುಶಾಂತ್ ಸಿಂಗ್ ಕುಟುಂಬ ಹಾಗೂ ತಂದೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಶಿವಸೇನಾ ನಾಯಕ ಮತ್ತು ಸಂಸದ ಸಂಜಯ್ ರಾವತ್ಗೆ ಲೀಗಲ್ ನೋಟಿಸ್ ಜಾರಿಯಾಗಿದೆ.
ಬಿಹಾರದ ಬಿಜೆಪಿ ಶಾಸಕ ಹಾಗೂ ಸುಶಾಂತ್ ಸಂಬಂಧಿ ನೀರಜ್ ಕುಮಾರ್ ಸಿಂಗ್ ಅಲಿಯಾಸ್ ಬಬ್ಲು ಅವರು ಈ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ 48 ಗಂಟೆಗಳೊಳಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಸಂಜಯ್ ರಾವತ್ ಅವರು, ನಟ ಸುಶಾಂತ್ ಸಿಂಗ್ ಅವರ ಬಗ್ಗೆ ಬರೆದಿದ್ದು, ಸುಶಾಂತ್ ತಮ್ಮ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದಿದ್ದರು. ಅಲ್ಲದೆ, ತಂದೆ ಎರಡನೇ ವಿವಾಹವಾದ ಬಳಿಕ ಅವರೊಂದಿಗೆ ಸುಶಾಂತ್ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ಅವರ ಸೋದರ ಸಂಬಂಧಿ ನೀರಜ್ ಕುಮಾರ್ ಸಿಂಗ್ ಅವರು ಸಂಜಯ್ ರಾವತ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್ನಲ್ಲಿ ತಿಳಿಸಿದ್ದಾರೆ.