ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಕಾರಣವನ್ನು ಕಂಡುಹಿಡಿಯುವಲ್ಲಿ ಪ್ರಮುಖವಾದ ವಿಸ್ಸೆರಾ (ಕರುಳಿನಲ್ಲಿದ್ದ ಆಹಾರದ ಮಾದರಿ)ಯನ್ನು ಸರಿಯಾಗಿ ಸಂರಕ್ಷಿಸದ ಕಾರಣ ಅದು ಕ್ಷೀಣಿಸಿದೆ ಎಂದು ಏಮ್ಸ್ನ ಮೂಲಗಳು ಬಹಿರಂಗಪಡಿಸಿವೆ.
ಸುಶಾಂತ್ ಸಿಂಗ್ರ ವಿಸ್ಸೆರಾದ ಸಂರಕ್ಷಣೆಯಲ್ಲಿ ಬೇಜವಾಬ್ದಾರಿ... ಏಮ್ಸ್ ಮೂಲಗಳಿಂದ ಮಾಹಿತಿ
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಇಲಾಖೆಯಿಂದ ಪಡೆದ ವಿಸ್ಸೆರಾವು "ಕಡಿಮೆ ಪ್ರಮಾಣದಲ್ಲಿದೆ ಮತ್ತು ಅದನ್ನು ಸರಿಯಾಗಿ ಸಂರಕ್ಷಿಸದ ಕಾರಣ ಕ್ಷೀಣಿಸಿದೆ" ಎಂದು ಏಮ್ಸ್ನ ಮೂಲಗಳು ತಿಳಿಸಿವೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಇಲಾಖೆಯಿಂದ ಪಡೆದ ವಿಸ್ಸೆರಾವು "ಕಡಿಮೆ ಪ್ರಮಾಣದಲ್ಲಿದೆ ಮತ್ತು ಅದನ್ನು ಸರಿಯಾಗಿ ಸಂರಕ್ಷಿಸದ ಕಾರಣ ಕ್ಷೀಣಿಸಿದೆ" ಎಂದು ಏಮ್ಸ್ನ ಮೂಲಗಳು ತಿಳಿಸಿವೆ. ಶುಕ್ರವಾರ ಸಂಜೆಯವರೆಗೂ, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಾರಣವನ್ನು ಕಂಡುಹಿಡಿಯುವಲ್ಲಿ ಪ್ರಮುಖವಾದ ವಿಸ್ಸೆರಾವನ್ನು ನವದೆಹಲಿಯ ಏಮ್ಸ್ ವಿಧಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷಿಸಲಾಗಿದೆ. ಈ ವೇಳೆ "ಒಳಾಂಗಗಳ ಕ್ಷೀಣತೆಯಿಂದಾಗಿ ರಾಸಾಯನಿಕ ಮತ್ತು ವಿಷ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸಾವಿಗೆ ನಿಖರ ಕಾರಣ ಕಂಡುಹಿಡಿಯುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.
ಶಂಕಿತ ವಿಷ ಅಥವಾ ಮಾದಕವಸ್ತು ಸೇವನೆಯಿಂದ ಸುಶಾಂತ್ ಸಾವನ್ನಪ್ಪಿದ್ದಾರೆಯೇ ಎಂದು ದೃಢೀಕರಿಸಲು ಸಿಬಿಐಗೆ ಒಳಾಂಗಗಳ ವಿಶ್ಲೇಷಣೆ ಅತ್ಯಂತ ನಿರ್ಣಾಯಕ ಪರೀಕ್ಷೆಯಾಗಿದೆ. ಜೂನ್ 15 ರಂದು ಶವ ಪರೀಕ್ಷೆ ನಡೆಸಿದ ನಂತರ, ಮುಂಬೈನ ಕೂಪರ್ ಆಸ್ಪತ್ರೆಯ ಐವರು ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ "ನೇಣು ಹಾಕಿಕೊಂಡು ಸುಶಾಂತ್ ಸಾವನಪ್ಪಿರುವುದಾಗಿ ಉಲ್ಲೇಖಿಸಿದ್ದರು.