ಕರ್ನಾಟಕ

karnataka

ETV Bharat / bharat

ಬಾಲಿವುಡ್ ಡ್ರಗ್ಸ್ ಕೇಸ್​: ತಾರೆಯರ ಮೊಬೈಲ್​​ಗಳು​​ ಗುಜರಾತ್​ ಎಫ್​ಎಸ್​ಎಲ್​ಗೆ ರವಾನೆ - ಬಾಲಿವುಡ್ ಡ್ರಗ್ಸ್ ಕೇಸ್ ವಿಚಾರ

ಬಾಲಿವುಡ್​ಗೆ ಮಾದಕ ವಸ್ತು ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಸಿಬಿ ತನಿಖೆ ಮುಂದುವರೆಸಿದ್ದು, ಬಾಲಿವುಡ್ ತಾರೆಯರ ಮೊಬೈಲ್​​ಗಳ​ನ್ನು ಗುಜರಾತ್​ ಎಫ್​ಎಸ್​ಎಲ್​ಗೆ ರವಾನೆ ಮಾಡಿದೆ.

Gujarat Forensic Science Laboratory
ಗುಜರಾತ್​​ನ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ

By

Published : Dec 16, 2020, 12:31 PM IST

ಗಾಂಧಿನಗರ(ಗುಜರಾತ್​): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್​ ನಂಟು ಆರೋಪ ವಿಚಾರದಲ್ಲಿ ಎನ್​ಸಿಬಿ ತನಿಖೆ ಮುಂದುವರೆಸಿದ್ದು, ಗುಜರಾತ್​​ನ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್​ಎಸ್​ಎಲ್​​)ನ ಮೊರೆಹೋಗಿದೆ.

ತನಿಖೆಯ ಅಂಗವಾಗಿ ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಬಾಲಿವುಡ್ ತಾರೆಯರ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್​ಗಳು ಸೇರಿದಂತೆ 85 ವಸ್ತುಗಳನ್ನು ಗುಜರಾತ್ ಎಫ್​ಎಸ್​ಎಲ್​ಗೆ ಕಳುಸಹಿಸಲಾಗಿದೆ. ಇದರ ಜೊತೆಗೆ ಪರೀಕ್ಷೆಗಾಗಿ ಡ್ರಗ್ಸ್​ನ 25 ಸ್ಯಾಂಪಲ್​ಗಳನ್ನು ರವಾನೆ ಮಾಡಲಾಗಿದೆ.

ಇದನ್ನೂ ಓದಿ:ಹೊಸ ವರ್ಷಕ್ಕೆ ನಶೆ ಏರಿಸಲು ಸಜ್ಜಾಗಿದ್ದ ಖದೀಮರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ಜಪ್ತಿ, ನಾಲ್ವರು ಅರೆಸ್ಟ್​

ರಿಯಾ ಚಕ್ರವರ್ತಿ, ರಿಯಾ ಸಹೋದರ ಶೋಯಿಕ್ ಚಕ್ರವರ್ತಿ ಮಾತ್ರವಲ್ಲದೇ ಸಾರಾ ಅಲಿ ಖಾನ್, ಅರ್ಜುನ್ ರಾಂಪಾಲ್, ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ ಮತ್ತು ಅವರ ಸ್ನೇಹಿತರ ಮೊಬೈಲ್ ಫೋನ್​ಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿದೆ.

ಎಫ್‌ಎಸ್‌ಎಲ್ ತನ್ನ ವರದಿಯನ್ನು ಸಲ್ಲಿಸಿದ ನಂತರವೇ ಸುಶಾಂತ್ ಸಿಂಗ್ ರಜಪೂತ್ ಸಾವು ಅಥವಾ ಮಾದಕ ವಸ್ತು ಜಾಲದ ವಿಚಾರವಾಗಿ ಮತ್ತಷ್ಟು ಕುತೂಹಲಕಾರಿ ವಿಚಾರಗಳು ಬಹಿರಂಗಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ.

ಈಗಾಗಲೇ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಅವರನ್ನು ಎನ್​ಸಿಬಿ ವಿಚಾರಣೆಗೆ ಒಳಪಡಿಸಿದೆ.

ABOUT THE AUTHOR

...view details