ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಲ್ಲಿನ ರಾಜ್ಯಪಾಲ ಜಗದೀಪ್ ದಿನ್‌ಕರ್ ವಾಗ್ದಾಳಿ ಮುಂದುವರಿಸಿದ್ದಾರೆ. ಸಾವರ್ಜನಿಕರ ಹಿತಾಸಕ್ತಿ ಕಾಪಾಡಬೇಕಾದರೆ ಭ್ರಷ್ಟಾಚಾರ ನಡೆಯುವ ಸ್ಥಳಗಳಲ್ಲಿ ಸರ್ಜಿಕಲ್ ದಾಳಿ ಮಾಡಬೇಕು ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ಸ್ಥಳಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು: ಬಂಗಾಳ ಗವರ್ನರ್ ಪ್ರತಿಪಾದನೆ - ಭ್ರಷ್ಟಾಚಾರದ ಮೇಲೆ ಸರ್ಜಿಕಲ್ ದಾಳಿ
ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಂಗಾಳದ ರಾಜ್ಯಪಾಲ ಜಗದೀಪ್ ದಿನ್‌ಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕಾದರೆ ಭ್ರಷ್ಟಾಚಾರ ನಡೆಯುವ ಸ್ಥಳಗಳಲ್ಲಿ ಸರ್ಜಿಕಲ್ ದಾಳಿ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ, ತಮ್ಮ ಟ್ವೀಟ್ ಅನ್ನು ಸಿಎಂ ದೀದಿಗೆ ಟ್ಯಾಗ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಪಾಲರು, ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಖಾತೆಗೆ ತಮ್ಮ ಹೇಳಿಕೆ ಟ್ಯಾಗ್ ಮಾಡಿದ್ದಾರೆ. ಪಾರದರ್ಶಕತೆ ಹಾಗೂ ಜನರ ಹಿತಾಸಕ್ತಿಗಾಗಿ ಭ್ರಷ್ಟಾಚಾರ ನಡೆಯುವ ಸ್ಥಳಗಳಲ್ಲಿ ಸರ್ಜಿಕಲ್ ದಾಳಿ ಮಾಡಬೇಕು. ಆಗ ಮಾತ್ರ ಅಧಿಕಾರಿ ವರ್ಗ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಬಗ್ಗೆ ಭಯಾನಕ ವರದಿಗಳು ಬರುವ ಸಾಧ್ಯತೆ ಇದೆ. ಕುದಿಸಿ ಎಲ್ಲವನ್ನು ಭಟ್ಟಿ ಇಳಿಸುವಿಕೆಯ ರೀತಿಯ ಮಾಡುತ್ತಿರುವುದು ಸತ್ಯವಲ್ಲ. ಮತ್ತೊಂದು ಹಗರಣದ ಮುಖವಾಡ ಬಯಲಾಗಲಿದೆ. ಸಾರ್ವಜನಿಕರ ಕೆಲಸಗಳನ್ನು ಸರಿಯಾಗಿ ಮಾಡಲು ಕಾರ್ಯವಿಧಾನಗಳು ಸರಿಯಿಲ್ಲ. ಖಂಡಿತವಾಗಿ ಇದೆಲ್ಲವೂ ಕಾನೂನಿನ ಕಣ್ಣಿಗೆ ಸಿಕ್ಕಬೀಳಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.