ಮುಂಬೈ: ಕೋವಿಡ್ 19 ತಂದಿಟ್ಟ ಬಿಕ್ಕಟ್ಟಿನಿಂದಾಗಿ ಮಾಸ್ಕ್ಗಳಿಗೆ ಭಾರಿ ಬೇಡಿಕೆ ಹಾಗೂ ಅಭಾವವಿದ್ದು, ಈ ನಡುವೆ ಅಲ್ಲಲ್ಲಿ ಮಾಸ್ಕ್ಗಳ ಕಳ್ಳತನ, ಅಧಿಕ ದರದಲ್ಲಿ ಅವುಗಳ ಮಾರಾಟ ನಡೆಯುತ್ತಿದೆ.
ಕಾಳಸಂತೆಯಲ್ಲಿ ಸರ್ಜಿಕಲ್ ಮಾಸ್ಕ್ಗಳ ಅಕ್ರಮ ಮಾರಾಟ... ಒಬ್ಬನ ಬಂಧನ - ಮಾಸ್ಕ್ಗಳ ಕಳ್ಳತನ
ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾಸ್ಕ್ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, 81 ಸಾವಿರ ಸರ್ಜಿಕಲ್ ಮಾಸ್ಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಳಸಂತೆಯಲ್ಲಿ ಮಾಸ್ಕ್ಗಳ ಮಾರಾಟ
ಮುಂಬೈನ ಧಾರಾವಿಯಲ್ಲಿ ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾಸ್ಕ್ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಆತನಿಂದ 12 ಲಕ್ಷ ಮೌಲ್ಯದ 81 ಸಾವಿರ ಸರ್ಜಿಕಲ್ ಮಾಸ್ಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನೌಶಾದ್ ಕಮಲ್ ಶೇಖ್ (35) ಬಂಧಿತ ಆರೋಪಿ. ಅಗತ್ಯ ಸರಕುಗಳ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.