ಕರ್ನಾಟಕ

karnataka

ETV Bharat / bharat

ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಏಕೈಕ ಆಟಗಾರ ರೈನಾ!

ಕ್ರಿಕೆಟ್​ ಮೈದಾನದಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ರೈನಾ, ಕ್ಷೇತ್ರ ರಕ್ಷಣೆಯಲ್ಲಿ ತಮ್ಮದೇ ರೀತಿಯ ವಿಶೇಷ ಛಾಪು ಮೂಡಿಸಿದ್ದರು. ತಂಡದ ಎಡಗೈ ಬ್ಯಾಟ್ಸ್‌ಮನ್ ಆಗಿ ಏಕದಿನ ಕ್ರಿಕೆಟ್‌ನಲ್ಲಿ 35.31ರ ಸರಾಸರಿಯಲ್ಲಿ 5,615 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ವಿಭಾಗಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಇವರ ಹೆಸರಲ್ಲಿದೆ.

Suresh Raina
ಸುರೇಶ್​ ರೈನಾ

By

Published : Aug 15, 2020, 10:25 PM IST

ನವದೆಹಲಿ: ಭಾರತದ ಕ್ರಿಕೆಟ್​ ಪ್ರೇಮಿಗಳು ಎಂ.ಎಸ್.ಧೋನಿ ನಿವೃತ್ತಿ ಘೋಷಣೆ ಅರಗಿಸಿಕೊಳ್ಳುವ ಮುನ್ನವೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಕ್ರಿಕೆಟ್​ ಮೈದಾನದಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ರೈನಾ, ಕ್ಷೇತ್ರ ರಕ್ಷಣೆಯಲ್ಲಿ ವಿಶೇಷ ಛಾಪು ಮೂಡಿಸಿದ್ದರು. ತಂಡದ ಎಡಗೈ ಬ್ಯಾಟ್ಸ್‌ಮನ್ ಆಗಿ ಏಕದಿನ ಕ್ರಿಕೆಟ್‌ನಲ್ಲಿ 35.31ರ ಸರಾಸರಿಯಲ್ಲಿ 5,615 ರನ್ ಗಳಿಸಿದ್ದಾರೆ.

ಸ್ಟೈಲಿಶ್ ಬ್ಯಾಟ್ಸ್‌ಮನ್, ಆಫ್ ಸ್ಪಿನ್ ಬೌಲರ್ ರೈನಾ ಅವರನ್ನು ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಮೈದಾನದಲ್ಲಿ ರೈನಾ ಬಳಿ ಚೆಂಡು ಹೋದರೆ ಬ್ಯಾಟ್ಸ್‌ಮನ್​​ಗಳು ವಿಕೆಟ್​ ಮಧ್ಯೆ ರನ್​ ಕದಿಯಲು ಹಿಂಜರಿಯುತ್ತಿದ್ದರು.

ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಉಪನಾಯಕನೂ​ ಆಗಿರುವ ರೈನಾ, ಕೆಲಕಾಲ ಭಾರತೀಯ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು. ಭಾರತ ತಂಡಕ್ಕೆ ನಾಯಕತ್ವ ನೀಡಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಇವರಿಗಿದೆ.

ವಿಶೇಷವೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಸರು ಕೂಡ ಇವರ ಹೆಸರಲ್ಲಿದೆ.

2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೈನಾ, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಧೋನಿ ನೇತೃತ್ವದ ತಂಡದ ಭಾಗವಾಗಿದ್ದರು. 2015ರ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನ ಉಳಿಸಿಕೊಂಡರು. ಆದರೆ ಆ ನಂತರ ತಂಡದ ಅನಿಯಮಿತ ಆಟಗಾರರಾದರು.

ABOUT THE AUTHOR

...view details