ಕರ್ನಾಟಕ

karnataka

ETV Bharat / bharat

ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದ್ದಕ್ಕೆ ಯುವಕನಿಗೆ ಸಿಟ್​-ಅಪ್​ ಶಿಕ್ಷೆ: ವಿಡಿಯೋ ವೈರಲ್​ ! - spitting in public

ಯುವಕ ಉಗುಳಿದ್ದನ್ನು ಗಮನಿಸಿದ ಪಾಲಿಕೆ ಅಧಿಕಾರಿಗಳು ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ, ಯುವಕನ ಬಳಿ ಸಾಕಷ್ಟು ಹಣ ಇಲ್ಲದೆ ಇದ್ದರಿಂದ ಸಿಟ್​-ಅಪ್​ ಶಿಕ್ಷೆ ನೀಡಿ ಸ್ವಚ್ಛತೆಯ ಪಾಠ ಮಾಡಿದ್ದಾರೆ.

ಯುವಕನಿಗೆ ಸಿಟ್​-ಅಪ್​ ಶಿಕ್ಷೆ

By

Published : Aug 31, 2019, 2:27 AM IST

ಅಹಮದಾಬಾದ್: ಭಾರತ ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಇದಕ್ಕೆ ಸಂಬಂಧಿಸಿದ ಕಾನೂನನ್ನು ಕಠಿಣಗೊಳಿಸಲಾಗಿದೆ. ಈ ಎಲ್ಲಾ ಕಾರಣದ ಹಿನ್ನೆಲೆ ಇಲ್ಲೋರ್ವ ಯುವಕ ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದ್ದಕ್ಕೆ ಅಧಿಕಾರಿಗಳು ತಕ್ಕ ಶಿಕ್ಷೆಯನ್ನೇ ನೀಡಿದ್ದಾರೆ.

ಸೂರತ್​ ಮಹಾನಗರ ಪಾಲಿಕೆ ಸ್ವಚ್ಛತೆ ಕಾಪಾಡಲು ಜನರಿಗೆ ತಿಳುವಳಿಕೆ ನೀಡುವುದರ ಜೊತೆಗೆ ದಂಡದ ಎಚ್ಚರಿಕೆಯನ್ನೂ ನೀಡಿದೆ. ಈ ಕಾರಣಕ್ಕಾಗಿಯೇ ಉಗುಳಿ ಸಿಕ್ಕಬಿದ್ದ ಯುವಕನಿಗೆ ಅಧಿಕಾರಿಗಳು ಸಿಟ್​-ಅಪ್​ ಶಿಕ್ಷೆ ನೀಡಿದ್ದಾರೆ. ಸೂರತ್‌ನ ವಾಗ್‌ಫತ್​ನಲ್ಲಿ ಈ ಘಟನೆ ನಡೆದಿದೆ. ಯುವಕ ಉಗುಳಿದ್ದನ್ನು ಗಮನಿಸಿದ ಪಾಲಿಕೆ ಅಧಿಕಾರಿಗಳು ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ, ಯುವಕನ ಬಳಿ ಸಾಕಷ್ಟು ಹಣ ಇಲ್ಲದೆ ಇದ್ದರಿಂದ ಸಿಟ್​-ಅಪ್​ ಶಿಕ್ಷೆ ನೀಡಿ ಸ್ವಚ್ಛತೆಯ ಪಾಠ ಮಾಡಿದ್ದಾರೆ.

ಯುವಕನಿಗೆ ಸಿಟ್​-ಅಪ್​ ಶಿಕ್ಷೆ

ಈ ಶಿಕ್ಷೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಅಧಿಕಾರಿಗಳು, ಜನರಲ್ಲಿ ಜಾಗೃತಿ ಮೂಡಿಸಲು ಇದು ಎಚ್ಚರಿಕೆಯ ಸಂದೇಶ ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನು ಯಾರಾದರೂ ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ ಹಾಗೂ ಕಸ ಬಿಸಾಡಿದರೆ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದೆ.

ABOUT THE AUTHOR

...view details