ಇರಾನ್:ಇರಾನ್‌ನ ಪ್ರಮುಖ ನಾಯಕ ಆಯತೊಲ್ಲಾ ಸೈಯದ್ ಅಲಿ ಖಮೇನಿ ಹಿಂದಿ ಭಾಷೆಯಲ್ಲಿಯೂ ಟ್ವಿಟರ್ ಖಾತೆ ತೆರೆದಿದ್ದಾರೆ.
ಹಿಂದಿ ಭಾಷೆಯಲ್ಲೂ ಟ್ವಿಟರ್ ಖಾತೆ ತೆರೆದ ಇರಾನ್ ಸರ್ವೋಚ್ಛ ನಾಯಕ ಖಮೇನಿ - ಅಯತೊಲ್ಲಾ ಸೈಯದ್ ಅಲಿ ಖಮಾನಿ
ಇರಾನ್‌ನ ಸರ್ವೋಚ್ಛ ನಾಯಕ ಆಯತೊಲ್ಲಾ ಸೈಯದ್ ಅಲಿ ಖಮೇನಿ ಹಿಂದಿ ಭಾಷೆಯಲ್ಲಿಯೂ ಟ್ವಿಟರ್ ಖಾತೆ ತೆರೆದು ಕುತೂಹಲ ಮೂಡಿಸಿದ್ದಾರೆ.
ಇರಾನ್ ಸುಪ್ರೀಮ್ ಲೀಡರ್
ಈ ಖಾತೆಯ ಹೆಸರು ಹಿಂದಿಯಲ್ಲಿದ್ದು, ಇದರಲ್ಲಿ ಹಿಂದಿ ಭಾಷೆಯಲ್ಲಿಯೇ ಟ್ವೀಟ್ ಮಾಡಲಾಗುತ್ತಿದೆ. ಈ ಖಾತೆಯಿಂದ ಈವರೆಗೆ ಎರಡು ಟ್ವೀಟ್‌ಗಳು ಬಂದಿವೆ. ಅದರಲ್ಲಿ ಮೊದಲ ಟ್ವೀಟ್, 'ಅತ್ಯಂತ ದಯೆ ಮತ್ತು ಸಹಾನುಭೂತಿಯುಳ್ಳ ಅಲ್ಲಾಹುವಿನ ಹೆಸರಿನಲ್ಲಿ' ಎಂದು ಬರೆದಿದೆ.
ಖಮೇನಿ ಜಗತ್ತಿನ ಇತರ ಪ್ರಮುಖ ಭಾಷೆಗಳಲ್ಲಿಯೂ ಟ್ವಿಟರ್ ಖಾತೆಗಳನ್ನು ತೆರೆದಿದ್ದಾರೆ. ಪರ್ಷಿಯನ್, ಅರೇಬಿಕ್, ಉರ್ದು, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಮತ್ತು ಇಂಗ್ಲಿಷ್ ಭಾಷೆಗಳು ಸೇರಿವೆ. ಆದರೆ, ಯಾವುದೇ ಭಾರತೀಯ ನಾಯಕನನ್ನು ಅವರು ಹಿಂಬಾಲಿಸಿಲ್ಲ. ಬದಲಾಗಿ, ವಿವಿಧ ಭಾಷೆಗಳ ನಮ್ಮ ಸ್ವಂತ ಖಾತೆಗಳನ್ನು ಹಿಂಬಾಲಿಸಿದ್ದಾರೆ.