ನವದೆಹಲಿ: ಜಿಎಸ್ಟಿ ಪದ್ಧತಿಯಡಿ ತೆರಿಗೆ ವಂಚಿಸುವವರನ್ನು ಬಂಧಿಸುವ ತೆರಿಗೆ ಅಧಿಕಾರಿಗಳ ಅಧಿಕಾರವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಅಡಿಯಲ್ಲಿ ತೆರಿಗೆ ವಂಚಕರನ್ನು ಬಂಧಿಸುವ ಟ್ಯಾಕ್ಸ್ ಅಧಿಕಾರಿಗಳ ಅಧಿಕಾರವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಹಾಗೂ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರಿದ್ದ ನ್ಯಾಯ ಪೀಠ, ಕೇಂದ್ರ ಸರ್ಕಾರಕ್ಕೆ ವಿವರಣೆ ಕೋರಿ ನೋಟಿಸ್ ಜಾರಿಗೊಳಿಸಿದೆ.