ನವದೆಹಲಿ:ತೊಂಭತ್ತು ವರ್ಷ ವಯಸ್ಸಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ಹಣ ನೀಡಲು ನಿರಾಕರಿಸಿದ ಕೇಂದ್ರದ ನಿಲುವನ್ನು ಪ್ರಶ್ನಿಸಿ ಪದೇ ಪದೇ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನ್ನು ಗಮನಿಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ದೇವ್ ನಾರಾಯಣ್ ಮಿಶ್ರಾ ಅವರಿಗೆ ಪಿಂಚಣಿ ನೀಡುವಂತೆ ನಿರ್ದೇಶನ ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಕೇಂದ್ರ ಸರ್ಕಾರ ಪ್ರಶ್ನಿಸಿತ್ತು. ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಯಾವುದೇ ಪ್ರತಿಫಲದ ಆಕಾಂಕ್ಷೆ ಇಲ್ಲದೆ ಸೇವೆ ಸಲ್ಲಿಸಿದವರ ಗೌರವಾರ್ಥವಾಗಿ 1972ರ ಸ್ವಾತಂತ್ರ್ಯ ಸೈನಿಕ್ ಸಮ್ಮಾನ್ ಪಿಂಚಣಿ ಯೋಜನೆಯಡಿ ಪಿಂಚಣಿ ನೀಡುವುದು ನ್ಯಾಯೋಚಿತ ಎಂದು ಕೋರ್ಟ್ ಹೇಳಿತ್ತು.