ಕರ್ನಾಟಕ

karnataka

370 ರದ್ದಿಗೆ ಈ ಪಕ್ಷಗಳಿಂದಲೂ ಬೆಂಬಲ..!

By

Published : Aug 5, 2019, 1:58 PM IST

Updated : Aug 5, 2019, 4:43 PM IST

ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಹಾಗೂ ಆರ್ಟಿಕಲ್​ 370 ಹಾಗೂ ಆರ್ಟಿಕಲ್​ 35 ಎ ಎರಡನ್ನೂ ವಾಪಸ್​ ಪಡೆಯಲಾಗಿದೆ, ಕೇಂದ್ರ ನಿರ್ಧಾರಕ್ಕೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ.

370 ರದ್ದಿಗೆ ಬೆಂಬಲ

ನವದೆಹಲಿ: ಜಮ್ಮು- ಕಾಶ್ಮೀರ ಇನ್ಮುಂದೆ ರಾಜ್ಯವಾಗಿರಲ್ಲ. ಅದೇನಿದ್ದರೂ ಕೇಂದ್ರಾಡಳಿತ ಪ್ರದೇಶವಾಗಿರಲಿದೆ.

ಇಂದು ರಾಷ್ಟ್ರಪತಿಗಳು ಜಮ್ಮು - ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು, ಲಡಾಕ್​ ಹಾಗೂ ಜಮ್ಮು- ಕಾಶ್ಮೀರ ಎರಡೂ ಕೇಂದ್ರಾಡಳಿತ ಪ್ರದೇಶಗಳಾಗಿವೆ.

ಅಷ್ಟೇ ಇಲ್ಲ ಜಮ್ಮು - ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಹಾಗೂ ಆರ್ಟಿಕಲ್​ 370 ಹಾಗೂ ಆರ್ಟಿಕಲ್​ 35 ಎ ಎರಡನ್ನೂ ಕಿತ್ತುಕೊಳ್ಳಲಾಗಿದೆ.

ಕೇಂದ್ರದ ಈ ನಿರ್ಧಾರಕ್ಕೆ ರಾಷ್ಟ್ರಪತಿಗಳು ತಮ್ಮ ಆದೇಶದ ಮೂಲಕ ಅಂಕಿತ ಹಾಕಿದ್ದಾರೆ.

ಈ ನಡುವೆ ಕೇಂದ್ರದ ಬೆಂಬಲಕ್ಕೆ ಎಐಎಡಿಎಂಕೆ, ಎಎಪಿ, ವೈಎಸ್​ಆರ್​ಪಿ, ಬಿಜು ಜನತಾದಳ ಹಾಗೂ ಬಿಎಸ್​ಪಿ ಪಕ್ಷಗಳು ಬೆಂಬಲ ನೀಡಿವೆ. ಟಿಆರ್​ಎಸ್​​​​ ಸಹ ಕೇಂದ್ರದ ಬೆಂಬಲಕ್ಕೆ ನಿಂತಿದೆ. ಕಾಂಗ್ರೆಸ್​ ಮಾಡಿದ್ದ ತಪ್ಪನ್ನು ಈಗ ಸರಿ ಪಡಿಸಲಾಗಿದೆ ಎಂದು ಟಿಆರ್​ಎಸ್​ ಎಂಪಿ ಹೇಳಿದ್ದಾರೆ.

ಈ ಮೂಲಕ ಜಮ್ಮು ಕಾಶ್ಮೀರಕ್ಕೆ ಈ ಹಿಂದೆ ಇದ್ದ ವಿಶೇಷ ಸ್ಥಾನಮಾನ ವಾಪಸ್​ ಪಡೆಯುವಲ್ಲಿ ಕೇಂದ್ರ ಸರ್ಕಾರದ ನೆರವಿಗೆ ನಿಂತಿವೆ.

ಯಾರಿಂದ ತೀವ್ರ ವಿರೋಧ?
ಈ ನಡುವೆ, ಎಂಡಿಎಂಕೆ ಇದನ್ನು ವಿರೋಧಿಸಿದೆ. ಆರ್ಟಿಕಲ್​ 370 ರದ್ದು ಮಾಡಿರುವ ಕ್ರಮವನ್ನ ಪ್ರಜಾಪ್ರಬುತ್ವ ವಿರೋಧಿ ಎಂದು ಹೇಳಿದ್ದಾರೆ.

Last Updated : Aug 5, 2019, 4:43 PM IST

ABOUT THE AUTHOR

...view details