ನವದೆಹಲಿ:ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಾವು ಜನರಿಗೆ ಕೇವಲ 24 ರೂ.ಗೆ ಈರುಳ್ಳಿ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವಾರವಷ್ಟೆ ಪ್ರತಿ ಕೆಜಿ 57 ರೂ. ಇದ್ದ ಈರುಳ್ಳಿ ಬೆಲೆ ಭಾನುವಾರ 70ರಿಂದ 80 ರೂ. ನಡುವೆ ಮಾರಾಟ ಆಗಿತ್ತು. ದೆಹಲಿ ಮಂಡಿಯಲ್ಲಿ ಪ್ರತಿ ಕೆ.ಜಿ.ಗೆ ಈರುಳ್ಳಿ 57 ರೂ., ಮುಂಬೈನಲ್ಲಿ 56 ರೂ, ಕೊಲ್ಕತ್ತಾದಲ್ಲಿ 48 ರೂ., ಚೆನ್ನೈನಲ್ಲಿ 34 ರೂ., ಗುರುಗ್ರಾಮದಲ್ಲಿ 60 ರೂ.ನಂತೆ ಮಾರಾಟವಾಗುತ್ತಿತ್ತು. ಇದೇ ಮಂಡಿಗಳಲ್ಲಿ 70ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ ಎಂದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದುಬಂದಿತ್ತು. ಈ ಎಲ್ಲ ಬೆಳವಣಿಗೆಯ ನಡುವೆಯೇ ಸಿಎಂ ಕೇಜ್ರಿವಾಲ್ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.