ಕರ್ನಾಟಕ

karnataka

ETV Bharat / bharat

ಸನ್ನಿ ಡಿಯೋಲ್ ಬದಲಿಗೆ ತನ್ನ ಹೆಸರು ಹೇಳಿದ ಅರ್ನಾಬ್ ಗೋಸ್ವಾಮಿಗೆ ಸನ್ನಿ ಪ್ರತಿಕ್ರಿಯೆ ಹೀಗಿತ್ತು..! - undefined

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುವಾಗ ಸನ್ನಿ ಡಿಯೋಲ್​​ ಹೆಸರು ಹೇಳುವ ಬದಲಿಗೆ ಆಕಸ್ಮಿಕವಾಗಿ ಸನ್ನಿ ಲಿಯೋನ್ ಎಂದು ಹೇಳಿದ್ದಕ್ಕೆ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಟ್ರೋಲ್​​ಗೆ ಒಳಗಾಗಿದ್ದಾರೆ.

ಸನ್ನಿ

By

Published : May 24, 2019, 10:54 AM IST

Updated : May 24, 2019, 4:04 PM IST

ಇಡೀ ದೇಶವೇ ಎದುರು ನೋಡುತ್ತಿದ್ದ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಬಿಜೆಪಿ ತನ್ನ ಮೇಲುಗೈ ಸಾಧಿಸಿದೆ. ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಲಿದ್ದಾರೆ.

ಸನ್ನಿಲಿಯೋನ್​

ಇಡೀ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಸುಮಲತಾ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಕಾಂಗ್ರೆಸ್​ ವಶದಲ್ಲಿದ್ದ ಪಂಜಾಬ್​​​​​​ನ ಗುರುದಾಸ್​ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಾಲಿವುಡ್ ನಟ ಗೆಲುವು ಸಾಧಿಸಿದ್ದಾರೆ. ಟಿವಿಯಲ್ಲಿ ಗುರುದಾಸ್​ಪುರ ಚುನಾವಣಾ ಫಲಿತಾಂಶದ ಮಾಹಿತಿ ನೀಡುತ್ತಿದ್ದ ಖ್ಯಾತ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಪಂಜಾಬ್​ನ ಗುರುದಾಸ್​​ಪುರದಲ್ಲಿ ಸನ್ನಿ ಡಿಯೋಲ್ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳುವ ಬದಲು ತಪ್ಪಾಗಿ ಸನ್ನಿ ಲಿಯೋನ್​ ಎಂದು ಹೇಳಿರುವುದು ಭಾರೀ ಟ್ರೋಲ್​​ಗೆ ಗುರಿಯಾಗಿದೆ.

ಅರ್ನಾಬ್ ಆಕಸ್ಮಿಕವಾಗಿ ಸನ್ನಿ ಲಿಯೋನ್ ಹೆಸರು ಹೇಳಿದ್ದರಿಂದ ಅವರನ್ನು ಟ್ರೋಲ್ ಹಾಗೂ ಟ್ವೀಟ್ ಮೂಲಕ ಎಲ್ಲರೂ ಕಾಲೆಳೆಯುತ್ತಿದ್ದಾರೆ. ಅಷ್ಟೇ ಏಕೆ ಸ್ವತ: ಸನ್ನಿ ಲಿಯೋನ್ ಕೂಡಾ 'ನಾನು ಎಷ್ಟು ಓಟುಗಳನ್ನು ಪಡೆದು ಮುನ್ನಡೆ ಸಾಧಿಸಿದ್ದೆನೆ' ಎಂದು ಪ್ರಶ್ನಿಸಿ ವಿಂಕಿಂಗ್ ಎಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ತಿಳಿದೋ ತಿಳಿಯದೆಯೋ ಅರ್ನಾಬ್ ತಾವು ಮಾಡಿದ ತಪ್ಪಲ್ಲದ ತಪ್ಪಿಗೆ ನಗೆಪಾಟಲಿಗೀಡಾಗಿದ್ದಾರೆ.

Last Updated : May 24, 2019, 4:04 PM IST

For All Latest Updates

TAGGED:

ABOUT THE AUTHOR

...view details