ಕರ್ನಾಟಕ

karnataka

ETV Bharat / bharat

ಮಸೀದಿ ಕಟ್ಟಲು 5 ಎಕರೆ ಜಾಗ ಸ್ವೀಕರಿಸುವ ಬಗ್ಗೆ ಚರ್ಚಿಸಿ ನಿರ್ಧಾರ: ಸುನ್ನಿ ವಕ್ಪ್ ಬೋರ್ಡ್‌ - ಅಯೋಧ್ಯೆ ತೀರ್ಪು ಅಯೋಧ್ಯೆ ತೀರ್ಪಿನ ಬಗ್ಗೆ ಸುನ್ನಿ ವಕ್ಫ್ ಬೋರ್ಡ್ ಪ್ರತಿಕ್ರಿಯೆ

ಮುಂದಿನ 15 ದಿನಗಳಲ್ಲಿ ಸುನ್ನಿ ವಕ್ಫ್ ಬೋರ್ಡ್​ ಸಭೆ​ ಕರೆದು ಮಸೀದಿ ನಿರ್ಮಾಣ ಮಾಡಲು 5 ಜಾಗ ನೀಡಿರುವ ಸುಪ್ರಿಂಕೋರ್ಟ್​ನ ತೀರ್ಪನ್ನು ಒಪ್ಪಿಕೊಳ್ಳುವ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ಸುನ್ನಿ ವಕ್ಫ್ ಬೋರ್ಡ್ ತಿಳಿಸಿದೆ.

ಜಫರ್ ಫಾರೂಖಿ

By

Published : Nov 10, 2019, 5:47 PM IST

ನವದೆಹಲಿ:ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠ ನೀಡಿದ ಐತಿಹಾಸಿಕ ತೀರ್ಪಿನ ಪ್ರಕಾರ ಮಸೀದಿ ನಿರ್ಮಾಣಕ್ಕೆ ಜಾಗ ನೀಡಿರುವ ಬಗ್ಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸುನ್ನಿ ವಕ್ಫ್ ಬೋರ್ಡ್​ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನ್ನಿ ಸೆಂಟ್ರಲ್‌ ವಕ್ಫ್ ಬೋರ್ಡ್‌ ಅಧ್ಯಕ್ಷ ಜಫರ್ ಫಾರೂಖಿ, ಮುಂದಿನ 15 ದಿನಗಳಲ್ಲಿ ಸುನ್ನಿ ವಕ್ಫ್ ಬೋರ್ಡ್​ ಮೀಟಿಂಗ್​ ಕರೆಯಲಾಗುತ್ತದೆ. ಈ ವೇಳೆ ಮಸೀದಿ ನಿರ್ಮಾಣ ಮಾಡಲು 5 ಜಾಗ ನೀಡಿರುವ ಸುಪ್ರಿಂಕೋರ್ಟ್​ನ ತೀರ್ಪನ್ನು ಒಪ್ಪಿಕೊಳ್ಳುವ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು.

ಸುಪ್ರೀಂಕೋರ್ಟ್​ ತೀರ್ಪಿನ ಜೊತೆಗೆ ಮುಸ್ಲಿಂ ಸಮುದಾಯದ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. ಮುಸ್ಲಿಂ ಧಾರ್ಮಿಕ ಸ್ಥಳಗಳ ರಕ್ಷಣೆ ಮತ್ತು ಪ್ರಾರ್ಥನೆ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಿತ ಜಾಗದ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್​, ವಿವಾದಿತ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳಿಗೆ ಒಪ್ಪಿಸಿ, ಸುನ್ನಿ ವಕ್ಫ್​ ಮಂಡಳಿಗೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ 5 ಎಕರೆ ಪರ್ಯಾಯ ಜಾಗ ನೀಡುವಂತೆ ತಿಳಿಸಿತ್ತು.

ABOUT THE AUTHOR

...view details