ಕರ್ನಾಟಕ

karnataka

ETV Bharat / bharat

ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸುನ್ನಿ ವಕ್ಫ್​ ಮಂಡಳಿ ನಿರ್ಧಾರ - ಅಯೋಧ್ಯೆಯಲ್ಲಿ ಮಸೀದಿ

ಕೇಂದ್ರ ಸರ್ಕಾರ ತನಗೆ ನೀಡಿದ್ದ ಐದು ಎಕರೆ ಜಮೀನನ್ನು ಸ್ವೀಕರಿಸಿರುವುದಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಸುನ್ನಿ ವಕ್ಫ್​ ಮಂಡಳಿ ಹೇಳಿಕೊಂಡಿತ್ತು. ಧನ್ನಿಪುರ ಗ್ರಾಮ ಅಯೋಧ್ಯೆಯಿಂದ 30 ಕಿಲೋ ಮೀಟರ್​ ದೂರದಲ್ಲಿದ್ದು, ಇಲ್ಲಿ ಶೇ.60ರಷ್ಟು ಮುಸ್ಲಿಂ ಸಮುದಾಯದ ಜನರು ವಾಸವಿದ್ದಾರೆ.

Sunni Waqf Board
Sunni Waqf Board

By

Published : Jul 29, 2020, 8:53 PM IST

ಅಯೋಧ್ಯೆ (ಉತ್ತರ ಪ್ರದೇಶ):ಆಗಸ್ಟ್​ 5ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, ಇದರ ಬೆನ್ನಲ್ಲೇ ಸುನ್ನಿ ವಕ್ಫ್​ ಮಂಡಳಿ ತನಗೆ ನೀಡಿರುವ ಐದು ಎಕರೆ ಜಮೀನಿನಲ್ಲಿ ಮಸೀದಿ ನಿರ್ಮಾಣ ಮಾಡಲು ಮುಂದಾಗಿದೆ.

ಸುಪ್ರೀಂಕೋರ್ಟ್​ ಆದೇಶದಂತೆ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರ ಸುನ್ನಿ ವಕ್ಫ್​ ಮಂಡಳಿಗೆ ಐದು ಎಕರೆ ಜಮೀನು ನೀಡಿದ್ದು, ಇದರಲ್ಲಿ ಮಸೀದಿ, ಗ್ರಂಥಾಲಯ ಹಾಗೂ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ.

ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಮಸೀದಿ ನಿರ್ಮಾಣವಾಗಲಿದೆ ಎಂದು ಅಹ್ಮದ್​ ಫಾರೂಖ್​​ ತಿಳಿಸಿದ್ದು, ಇದಕ್ಕಾಗಿ ನಿರ್ಮಾಣಗೊಂಡಿರುವ ಟ್ರಸ್ಟ್​​ನಲ್ಲಿ 15 ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ತನಗೆ ನೀಡಿದ್ದ ಜಮೀನನ್ನು ಸ್ವೀಕರಿಸಿರುವುದಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಸುನ್ನಿ ವಕ್ಫ್​ ಮಂಡಳಿ ಹೇಳಿಕೊಂಡಿತ್ತು. ಧನ್ನಿಪುರ ಗ್ರಾಮ ಅಯೋಧ್ಯೆಯಿಂದ 30 ಕಿಲೋ ಮೀಟರ್​ ದೂರದಲ್ಲಿದ್ದು, ಇಲ್ಲಿ ಶೇ.60ರಷ್ಟು ಮುಸ್ಲಿಂ ಸಮುದಾಯ ವಾಸವಿದೆ.

ಹಂತ ಹಂತವಾಗಿ ಅಯೋಧ್ಯೆ ರಾಮಮಂದಿರ ನಿರ್ಮಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದ್ದು, ಆಗಸ್ಟ್​​ 5ರಂದು ಭೂಮಿ ಪೂಜೆ ನಡೆಯಲಿದೆ. ವಿಶ್ವ ಹಿಂದೂ ಪರಿಷತ್​​ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದು, ಅದಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​​ ಸ್ಥಾಪಿಸಲಾಗಿದೆ.

ABOUT THE AUTHOR

...view details