ಹೈದರಾಬಾದ್: ಫಿಫಾ ಹಾಗೂ ವಿಶ್ವ ಆರೋಗ್ಯ ಸಂಘಟನೆ ಕೊರೊನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದೆ. ಈ ಅಭಿಯಾನ ವಿಶ್ವದ ಪ್ರಸಿದ್ಧ ಫುಟ್ಬಾಲ್ ಆಟಗಾರರನ್ನು ಒಳಗೊಂಡಿದ್ದು, ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುನೀಲ್ ಛೆಟ್ರಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೊಂದು ವಿಡಿಯೋ ಅಭಿಯಾನವಾಗಿದ್ದು, ಜನರಿಗೆ ಕೊರೊನಾ ಹರಡದಂತೆ ತಡೆಯಲು ಜನರು ಅನುಸರಿಬೇಕಾದ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. 13 ಭಾಷೆಗಳಲ್ಲಿ ಪ್ರಕಟವಾಗಲಿರುವ ಈ ವಿಡಿಯೋದಲ್ಲಿ 28 ಆಟಗಾರರು ಭಾಗಿಯಾಗಲಿದ್ದಾರೆ.
ಕೋವಿಡ್-19 ವಿರುದ್ಧ ಫಿಫಾ, ಡಬ್ಲ್ಯೂಹೆಚ್ಒ ''ಫುಟ್ಬಾಲ್'' ಅಭಿಯಾನ: ಸುನಿಲ್ ಛೆಟ್ರಿ ಭಾಗಿ - ಕೊರೊನಾ
ಕೊರೊನಾ ವಿರುದ್ಧ ಫಿಫಾ ಹಾಗೂ ವಿಶ್ವ ಆರೋಗ್ಯ ಸಂಘಟನೆ ಸಮರ ಸಾರಿವೆ. ವಿಶ್ವದ ಪ್ರಖ್ಯಾತ ಫುಟ್ಬಾಲ್ ಆಟಗಾರರನ್ನು ಒಳಗೊಂಡ ಒಂದು ತಂಡವನ್ನು ರಚನೆ ಮಾಡಿದ್ದು ಈ ತಂಡ ವಿಡಿಯೋ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಿದೆ.
ಡಬ್ಲ್ಯುಎಚ್‌ಒ ಸೂಚಿಸಿದಂತೆ ಕೊರೊನಾದಿಂದ ದೂರವಿರಲು ಐದು ಪ್ರಮುಖ ಸಲಹೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಇವರು ಮಾಡಲಿದ್ದಾರೆ. ಕೈ ತೊಳೆಯುವುದು, ಕೆಮ್ಮುವ ಶಿಷ್ಟಾಚಾರ, ಮುಖವನ್ನು ಮುಟ್ಟದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮನೆಯಲ್ಲೇ ಇರುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಆಟಗಾರರು ಮಾಡಲಿದ್ದಾರೆ. ಈ ಅಭಿಯಾನದಲ್ಲಿ ಪ್ರಸ್ತುತ ಆಟಗಾರರ ಜೊತೆಗೆ ಮಾಜಿ ಆಟಗಾರರೂ ಕೂಡಾ ಇರಲಿದ್ದಾರೆ.
ಅಭಿಯಾನದಲ್ಲಿ ಭಾಗವಹಿಸುವ ಆಟಗಾರರು: ಸುನಿಲ್ ಛೆಟ್ರಿ, ಲಿಯೋನೆಲ್ ಮೆಸ್ಸಿ, ಕಾರ್ಲಿ ಲಾಯ್ಡ್, ಸಾಮಿ ಅಲ್ ಜಾಬರ್, ಇಕರ್ ಕ್ಯಾಸಿಲಾಸ್, ಅಲಿಸನ್ ಬೆಕರ್, ಎಮ್ರೆ ಬೆಲೊಜೊಗ್ಲು, ಜೇರೆಡ್ ಬೊರ್ಗೆಟ್ಟಿ, ಜಿಯಾನ್ಲುಗಿ ಬಫನ್, ಯೂರಿ ಜೋರ್ಕೆಫ್, ಮಿಡೋ, ಮೈಕೆಲ್ ಓವನ್, ಪಾರ್ಕ್ ಜಿ-ಸಂಗ್, ಕಾರ್ಲೆಸ್ ಪುಯೋಲ್, ಸೆಲಿಯಾ ಸಾಸಿಕ್, ಅಸಕೊ ತಕಾಕುರಾ, ಅಯಾ ಟೂರ್, ಜುವಾನ್ ಸೆಬಾಸ್ಟಿಯನ್ ವೆರಾನ್, ಸನ್ ವೆನ್, ಕ್ಸೇವಿ ಹೆರ್ನಾಂಡೆಜ್ ಸೇರಿದಂತೆ ಇನ್ನೂ ಹಲವರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.