ಅಮೃತಸರ (ಪಂಜಾಬ್): ವಿದೇಶಿ ಅನುದಾನದ ವಿಚಾರದಲ್ಲಿ ಕಾನೂನು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಪುತ್ರ ರಣಿಂದರ್ ಸಿಂಗ್ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಸಮನ್ಸ್ ನೀಡಿರುವ ಕಾರಣದಿಂದ ರಣಿಂದರ್ ಸಿಂಗ್ ಅಕ್ಟೋಬರ್ 27ರಂದು ಜಾರಿ ನಿರ್ದೇನಾಲಯದ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ರಣಿಂದರ್ ಸಿಂಗ್ ಅಲ್ಪೈನ್ ರಾಷ್ಟ್ರದಲ್ಲಿ ಖಾತೆ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಖಾತೆ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿಕೊಂಡಿದ್ದು, ಇದರ ಆಧಾರ ಮೇಲೆ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡಿದೆ.
ಈಗ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಅನ್ನು ರಣಿಂದರ್ ಸಿಂಗ್ ಅವರ ವಕೀಲ ಜೈವೀರ್ ಶೆರ್ಗಿಲ್ ಪ್ರಶ್ನಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೈವೀರ್ ಶೆರ್ಗಿಲ್ ನನ್ನ ಕ್ಷಕ್ಷಿದಾರ ರಣಿಂದರ್ ಸಿಂಗ್ ಜಾರಿ ನಿರ್ದೇಶನಾಲಯದ ಸಮನ್ಸ್ ಸ್ವೀಕರಿಸಿದ್ದಾರೆ. ಅವರು ಕಾನೂನನ್ನು ಗೌರವಿಸುತ್ತಾರೆ. ಇದು ಹಳೆಯ ಪ್ರಕರಣವಾಗಿದ್ದು, ಪ್ರಶ್ನಾರ್ಹವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.