ಕರ್ನಾಟಕ

karnataka

ETV Bharat / bharat

ಆಗ ದೇವರಕೊಂಡ ಜೊತೆ ನಟಿಸಬೇಡ ಎಂದಿದ್ದ ತಾಯಿ... ಈಗ ಇಬ್ಬರ ಪಾತ್ರಕ್ಕೆ ಫುಲ್​ ಖುಷ್​!

ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಪೋಷಕರು ವಿಜಯ್​ ದೇವರಕೊಂಡ ಜೊತೆ ನಟಿಸಬೇಡ ಎಂದರೂ ಎರಡನೇ ಚಿತ್ರ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಆದ್ರೆ ರಶ್ಮಿಕಾ ಮಂದಣ್ಣರ ತಾಯಿ ಅಧಿಕೃತವಾಗಿ ಟ್ವಿಟರ್​​​​ಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಮಗಳ ಚಿತ್ರದ ಬಗ್ಗೆ ಹೊಗಳಿದ್ದಾರೆ.

ಕೃಪೆ: Twitter

By

Published : Jul 30, 2019, 5:31 PM IST

ಹೌದು, ಏಪ್ರಿಲ್​ ತಿಂಗಳಲ್ಲಿ ಖಾತೆ ತೆಗೆದಿದ್ದ ರಶ್ಮಿಕಾ ತಾಯಿ ಸುಮನ್​ ಮಂದಣ್ಣ ನಿನ್ನೆ ತಮ್ಮ ಮಗಳ ಚಿತ್ರದ ಬಗ್ಗೆ ಟ್ವೀಟ್​ ಮಾಡಿದ್ದಾರೆ. 'ಡಿಯರ್​ ಲಿಲ್ಲಿ, ನೀನು ನಿನ್ನ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದೀಯಾ...! ನೀನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೀನು ಮಿಂಚುತ್ತಿದ್ದೀಯಾ. ಐ ಲವ್​ಯು ಬೇಬಿ' ಎಂದು ಮಗಳ ಮತ್ತು ವಿಜಯ ದೇವರಕೊಂಡ ಪಾತ್ರದ ಬಗ್ಗೆಯೂ ಹೊಗಳಿ ಅವರ ಮುಂದಿನ ಸಿನಿಮಾಗಳಿಗೆ ಶುಭ ಕೋರಿ ಟ್ವೀಟ್​ ಮಾಡಿದ್ದಾರೆ.

ತಾಯಿಯ ಟ್ವೀಟ್​ಗೆ ರಶ್ಮಿಕಾ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಮತ್ತೆ ನನ್ನ ಬಳಿ ಫೋನ್​ ಇದೆ. ಮೊಬೈಲ್​ಗೆ ಕರೆ ಮಾಡಿ ಹೇಳ್ಬಹುದಾಗಿತ್ತು ಮಮ್ಮಿ, ಈ ಮೇಸೆಜ್​ಗಳು ಎಲ್ಲರೂ ಓದುತ್ತಿದ್ದಾರೆ ಎಂದು ರಶ್ಮಿಕಾ ಮಂದಣ್ಣಾ ತಾಯಿ ಟ್ವೀಟ್​ಗೆ ರೀ ಟ್ವೀಟ್​​ ಮೂಲಕ ಉತ್ತರ ಕೊಟ್ಟಿದ್ದಾರೆ

ಇನ್ನು ಕೆಲವರು ನಿಮ್ಮ ಮಗಳಿಗೆ ಮೊದಲು ಕನ್ನಡ ಕಲಿಸು. ಕನ್ನಡದವರು ನಿಮ್ಮ ಮಗಳನ್ನು ದೇಶಕ್ಕೆ ಪರಿಚಯಿಸಿದವರು ಅಂತಾ ರೀ ಟ್ವೀಟ್​ ಮಾಡಿದ್ದಾರೆ. ಇದರಿಂದ ಸುಮನ್​ ಮಂದಣ್ಣ ಅವರಿಗೆ ಕೊಂಚ ಬೇಸರವನ್ನೂ ಉಂಟು ಮಾಡಿದ್ದಾರೆ.

ABOUT THE AUTHOR

...view details