ಮುಂಬೈ: ಆರ್ಥಿಕತೆಯನ್ನು ಮರಳಿ ದಾರಿಗೆ ತರಲು ಕೋವಿಡ್ -19 ಪರಿಣಾಮ ಬೀರದ ಅಥವಾ ಸೋಂಕಿನ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸರಾಗಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಒಟ್ಟಾಗಿ ಪ್ರಾರಂಭಿಸಬೇಕು ಎಂದು ಎನ್‌ಸಿಪಿ ಮುಖಂಡೆ ಸುಪ್ರಿಯಾ ಸುಲೆ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯ ಲೋಕಸಭಾ ಸದಸ್ಯೆ ಸುಲೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬಾರದು. ಮಿಲಿಟರಿ ರೀತಿಯ ಶಿಸ್ತಿನೊಂದಿಗೆ ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಹಂತಹಂತವಾಗಿ ಸಡಿಲಗೊಳಿಸಬೇಕು ಎಂದು ಹೇಳಿದ್ದಾರೆ.
ಅನ್ಲಾಕ್ ಮಾಡುವುದು ಹೇಗೆ ಎಂಬುದರ ಕುರಿತು ಕೇಂದ್ರವು ಕೆಲವು ಮಾರ್ಗಸೂಚಿಗಳನ್ನು ನೀಡಬೇಕು. ಆರ್ಥಿಕತೆ ನಿಧಾನವಾಗಿ ಮತ್ತೆ ಹಾದಿಗೆ ತರಲು ಹಂತ ಹಂತವಾಗಿ ಅನ್ಲಾಕ್ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.