ನವದೆಹಲಿ: ಸಂಸತ್ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ವಿವಾದಿತ ಕೃಷಿ ಮಸೂದೆಗಳಿಗೆ ಅಂಕಿತ ಹಾಕದೆ ಹಿಂದುರಿಗಿಸಬೇಕೆಂದು ಎನ್ಡಿಎ ಮೈತ್ರಿಕೂಟದ ಪಕ್ಷವಾಗಿರುವ ಶಿರೋಮಣಿ ಅಕಾಲಿದಳದ ಸಂಸದ ಸುಖ್ಬೀರ್ ಸಿಂಗ್ ಬಾದಲ್ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.
ಕೃಷಿ ಮಸೂದೆಗಳಿಗೆ ಸಹಿ ಹಾಕಬೇಡಿ: ರಾಷ್ಟ್ರಪತಿಗೆ ಸುಖ್ಬೀರ್ ಸಿಂಗ್ ಬಾದಲ್ ಮನವಿ - MP Sukhbir Singh Badal appeals to the President
ವಿವಾದಿತ ಕೃಷಿ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿಗೆ ಸಂಸದ ಸುಖ್ಬೀರ್ ಸಿಂಗ್ ಬಾದಲ್ ಮನವಿ ಮಾಡಿದ್ದಾರೆ.
ಕೃಷಿ ಮಸೂದೆಗೆ ಸಹಿ ಹಾಕದಂತೆ ರಾಷ್ಟ್ರಪತಿಗೆ ಮನವಿ
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೃಷಿ ಮಸೂದೆಗೆ ಸಹಿ ಹಾಕಬೇಡಿ, ಅದನ್ನು ಸಂಸತ್ಗೆ ಹಿಂದಿರುಗಿಸಿ. ದಯವಿಟ್ಟು ರೈತರು, ಕಾರ್ಮಿಕರು, ಮಂಡಿ ಕಾರ್ಮಿಕರು ಮತ್ತು ದಲಿತರ ಪರವಾಗಿ ತಾವು ಮಧ್ಯಪ್ರವೇಶಿಸಿ. ಇಲ್ಲದಿದ್ದರೆ, ಅವರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ರಾಷ್ಟ್ರಪತಿಗೆ ಅಕಾಲಿ ದಳ ಸಂಸದ ಮನವಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವ ಸ್ಥಾನಕ್ಕೆ ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ರಾಜೀನಾಮೆ ಸಲ್ಲಿಸಿ, ರೈತರ ಪರ ನಿಲ್ಲುವುದಾಗಿ ಘೋಷಿಸಿದ್ದರು.