ನವದೆಹಲಿ:ಆತ್ಮಹತ್ಯೆ ಮಹಾಪಾಪ ಎನ್ನುತ್ತದೆ ಧರ್ಮ. ಆತ್ಮಹತ್ಯೆಗೆ ಶರಣಾದವರು ಇಲ್ಲಿ ಇರಲಾರದೆ, ಅಲ್ಲಿಗೆ ಹೋಗಲಾರದೆ ತ್ರಿಶಂಕು ಸ್ಥಿತಿಯಲ್ಲಿ ನರಳುತ್ತಿರುತಾನಂತೆ. ಆತ್ಮಹತ್ಯೆ ಅನ್ನೋದು ಹೇಡಿಗಳ ಅಂತಿಮ ಆಯ್ಕೆ ಎಂಬ ಮಾತೂ ಇದೆ. ಹೀಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 2019 ರಲ್ಲಿ 1,39,123. 2018ಕ್ಕೆ (1,34,516 ಆತ್ಮಹತ್ಯೆಗಳು) ಹೋಲಿಸಿದ್ರೆ ಆತ್ಮಹತ್ಯೆಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಖಿಲ ಭಾರತ ಆತ್ಮಹತ್ಯೆ ದರಕ್ಕೆ (ಶೇ. 10.4) ಹೋಲಿಸಿದರೆ, ನಗರಗಳಲ್ಲಿ ಆತ್ಮಹತ್ಯೆ ಪ್ರಮಾಣ (ಶೇ. 13.9)ರಷ್ಟು ಹೆಚ್ಚಾಗಿದೆ.
ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳಿಗೆ ಕೌಟುಂಬಿಕ ಸಮಸ್ಯೆಯೇ (ಶೇ.32.4) ಪ್ರಮುಖ ಕಾರಣವಾಗಿದೆ. ಮದುವೆ ಸಂಬಂಧಿತ ಕಾರಣಗಳಿಗೆ ಶೇ.5.5ರಷ್ಟು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.68.4 ಮಂದಿ ಪುರುಷರಾಗಿದ್ದರೆ, ಶೇ.62.5ರಷ್ಟುಮಂದಿ ಮಹಿಳೆಯರಾಗಿದ್ದಾರೆ. ಆತ್ಮಹತ್ಯೆಯ ವಿಧಾನದಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದವರ ಪ್ರಮಾಣ ಶೇ.53.6ರಷ್ಟಿದ್ದರೆ, ವಿಷ ಸೇವಿಸಿದವರ ಪ್ರಮಾಣ ಶೇ.25.8ರಷ್ಟಿದೆ. ಅನಾರೋಗ್ಯಕ್ಕೆ ತುತ್ತಾಗಿ ಶೇ.17.1 ರಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಒಟ್ಟಾರೆ ದೇಶದಲ್ಲಿ 2019ರಲ್ಲಿ ಆತ್ಮಹತ್ಯೆಗಳ ಪ್ರಮಾಣ ಶೇ. 55.0ನಷ್ಟಿದೆ.