ಜೈಪುರ: ಪೂರ್ವ ಲಡಾಖ್‌ನಲ್ಲಿನ ಚೀನಾ ಪಡೆಗಳ ಪ್ರಚೋದನಕಾರಿ ಕ್ರಮವನ್ನು ಅಖಿಲ ಭಾರತ ಸೂಫಿ ಸಜ್ಜನಾಶಿನ್ ಕೌನ್ಸಿಲ್ (ಎಐಎಸ್‌ಎಸ್‌ಸಿ) ಬಲವಾಗಿ ಖಂಡಿಸಿದೆ. ನೇಪಾಳ ತನ್ನ ರಾಜಕೀಯ ನಕ್ಷೆಯನ್ನು ಪುನಃ ರಚಿಸುವ ಮಸೂದೆಯನ್ನು ಅಂಗೀಕರಿಸುರುವುದಕ್ಕೆ ಅಸಮಾಧಾನ ಹೊರಹಾಕಿದೆ.
ಕೋವಿಡ್-19 ಅನ್ನು ಎದುರಿಸಲು ಇಡೀ ಜಗತ್ತು ಕಾರ್ಯನಿರತವಾಗಿದೆ. ನಿರ್ದಿಷ್ಟವಾಗಿ ಭಾರತವು ವೈರಸ್ ಹರಡುವುದನ್ನು ತಡೆಯಲು ಮತ್ತು ಕೆಲ ವೈದ್ಯಕೀಯ ಸಂಪನ್ಮೂಲಗಳನ್ನು ಒದಗಿಸಿ, ಜಗತ್ತಿಗೆ ಸಹಾಯ ಮಾಡುವಲ್ಲಿ ನಿರತವಾಗಿದೆ. ಇಂತಹ ಸಮಯದಲ್ಲಿ ನೆರೆಯ ರಾಷ್ಟ್ರಗಳ ಈ ದುರದೃಷ್ಟಕರ ಮತ್ತು ಪ್ರಚೋದನಕಾರಿ ಕ್ರಮಗಳು ಸರಿಯಲ್ಲ. ಸ್ವಾರ್ಥಿ ನೇಪಾಳ ಸರ್ಕಾರ ನಿಜವಾದ ಸ್ನೇಹದ ಅರಿವಿಲ್ಲದೆ ಕುರುಡಾಗಿದೆ ಎಂದು ಎಐಎಸ್ಎಸ್ಸಿ ಸಂಸ್ಥಾಪಕ ಅಧ್ಯಕ್ಷ ಸೈಯದ್ ನಾಸೆರುದ್ದೀನ್ ಚಿಸ್ಟಿ ಹೇಳಿದರು.
ನೇಪಾಳ ಸರ್ಕಾರದ ಈ ಪ್ರಚೋದನಕಾರಿ ಕ್ರಿಯೆ ದ್ವಿಪಕ್ಷೀಯ ಸಂಬಂಧಗಳ ತತ್ವಗಳಿಗೆ ಮತ್ತು ಸಾರ್ಕ್‌ನ ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿದೆ ಎಂದರು.