ಭುವನೇಶ್ವರ್:ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ತಮ್ಮ ಮರಳು ಕಲಾಕೃತಿ ಮೂಲಕ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಅಮೆರಿಕಾದ ಬಾಸ್ಕೆಟ್ ಬಾಲ್ ಆಟಗಾರ ಕೋಬ್ ಬ್ರ್ಯಾಂಟ್ಗೆ ಹೃದಯಪೂರ್ವಕ ನಮನ ಸಲ್ಲಿಸಿದ್ದಾರೆ.
ಒಡಿಶಾದ ಪುರಿ ಸಮುದ್ರ ತೀರದಲ್ಲಿ 15 ಅಡಿ ಉದ್ದ ಹಾಗೂ 8 ಅಡಿ ಅಗಲದ ಮರಳು ಕಲಾಕೃತಿಯನ್ನು ನಿರ್ಮಿಸಿರುವ ಸುದರ್ಶನ್, ಕೋಬ್ ಬ್ರ್ಯಾಂಟ್ ಹಾಗೂ ಕೋಬ್ ಬಾಸ್ಕೆಟ್ ಬಾಲ್ ಆಡುತ್ತಿರುವ ಚಿತ್ರ ಬಿಡಿಸಿದ್ದಾರೆ. ಅದರ ಮೇಲೆ 'ವಿ ವಿಲ್ ಮಿಸ್ ಯು' ಎಂದು ಬರೆದಿದ್ದಾರೆ. ಈ ಕಲಾಕೃತಿಯನ್ನು ನಿರ್ಮಿಸಲು ಸುದರ್ಶನ್, ಐದು ಟನ್ಗಳಷ್ಟು ಮರಳು ಹಾಗೂ ನಾಲ್ಕು ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ.
ಅಮೆರಿಕಾದ ಬ್ಯಾಸ್ಕೆಟ್ ಬಾಲ್ ಆಟಗಾರ ಹಾಗೂ ಮಾಜಿ ಎನ್ಬಿಎ ಸ್ಟಾರ್ ಕೋಬ್ ಬ್ರ್ಯಾಂಟ್ ಹಾಗೂ ಆತನ 13 ವರ್ಷದ ಮಗಳು ಗಿಯಾನ್ನ ಸೇರಿದಂತೆ 9 ಮಂದಿ ಭಾನುವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರು. ಈ ಕುರಿತು ಮಾತನಾಡಿರುವ ಸುದರ್ಶನ್, ಬ್ರ್ಯಾಂಟ್ರ ಸಾವು ತೀರಾ ನೋವಿನ ಸಂಗತಿಯಾಗಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮರಳು ಶಿಲ್ಪಿ ಪಟ್ನಾಯಕ್, ವಿಶ್ವದಾದ್ಯಂತ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಶಿಲ್ಪಕಲೆ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ.