ಪುರಿ: ಖ್ಯಾತ ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಟ್ನಾಯಕ್ ಅವರು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಮರಳಿನಲ್ಲಿ ಸುಶಾಂತ್ ಅವರ ಕಲಾಕೃತಿ ರಚಿಸಿದ್ದಾರೆ.
ಜಸ್ಟೀಸ್ ಫಾರ್ ಸುಶಾಂತ್: ಮರಳು ಕಲಾಕೃತಿ ಮೂಲಕ ಸುದರ್ಶನ್ ಪಟ್ನಾಯಕ್ ಒತ್ತಾಯ - Bollywood actor Sushant Singh Rajput
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಸಿಗಬೇಕೆಂದು ಖ್ಯಾತ ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ಸುಶಾಂತ್ ಕಲಾಕೃತಿ ಬಿಡಿಸಿದ್ದಾರೆ.
ಸುದರ್ಶನ್ ಪಟ್ನಾಯಕ್ ಸ್ಯಾಂಡ್ ಆರ್ಟ್
ಸುಶಾಂತ್ ಮರಳಿನ ಕಲಾಕೃತಿಯಲ್ಲಿ ಹಲವಾರು ಪ್ರಶ್ನಾರ್ಥಕ ಚಿಹ್ನೆಗಳಿವೆ. ಜಸ್ಟೀಸ್ ಫಾರ್ ಸುಶಾಂತ್ ಎಂದು ಬರೆದು ಸಾವಿಗೆ ನ್ಯಾಯ ಸಿಗಬೇಕೆಂದು ಸುದರ್ಶನ್ ಪಟ್ನಾಯಕ್ ಒತ್ತಾಯಿಸಿದ್ದಾರೆ.
ನಟ ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ. ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.