ಕರ್ನಾಟಕ

karnataka

ETV Bharat / bharat

ಕೋವಿಡ್​ ಮಧ್ಯೆಯೂ ಯಶಸ್ವಿಯಾಗಿ ಚುನಾವಣೆ ನಡೆಸಿದ್ದು ಅಸಾಧಾರಣ ಸಾಧನೆ: ರಾಷ್ಟ್ರಪತಿ

11ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಭಾರತದ ಚುನಾವಣಾ ಆಯೋಗ ಪ್ರಾರಂಭಿಸುತ್ತಿರುವ 'ಹಲೋ ವೋಟರ್ಸ್' ಎಂಬ ಆನ್‌ಲೈನ್ - ಡಿಜಿಟಲ್ ರೇಡಿಯೋ ಸೇವೆಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಚಾಲನೆ ನೀಡಿದರು.

Ram Nath Kovind
ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್

By

Published : Jan 25, 2021, 3:42 PM IST

ನವದೆಹಲಿ: ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್​ನಲ್ಲಿ ಕೊರೊನಾ ಸಾಂಕ್ರಾಮಿಕದ ನಡುವೆಯೂ ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಲಾಗಿದ್ದು, ಇದು ನಮ್ಮ ಪ್ರಜಾಪ್ರಭುತ್ವದ ಅಸಾಧಾರಣ ಸಾಧನೆ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹೇಳಿದ್ದಾರೆ.

11ನೇ ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಅವರು, ಕೋವಿಡ್​ ಮಧ್ಯೆ ಯಶಸ್ವಿ ಹಾಗೂ ಸುರಕ್ಷಿತವಾಗಿ ಎಲೆಕ್ಷನ್​​ ನಡೆಸಿದ್ದಕ್ಕೆ ಚುನಾವಣಾ ಆಯೋಗವನ್ನೂ ಪ್ರಶಂಸಿದರು.

ಇದನ್ನೂ ಓದಿ: ಇಂದು ರಾಷ್ಟ್ರೀಯ ಮತದಾರರ ದಿನ: ಚುನಾವಣಾ ಆಯೋಗದ ಕೊಡುಗೆ ಪ್ರಶಂಸಿದ ಮೋದಿ

ಭಾರತ ಸಂವಿಧಾನದ ವಾಸ್ತುಶಿಲ್ಪಿ ಡಾ. ಬಿ.ಆರ್.​ ಅಂಬೇಡ್ಕರ್ ಅವರು ಮತದಾನದ ಹಕ್ಕನ್ನು ಅತ್ಯುನ್ನತವೆಂದು ಪರಿಗಣಿಸಿದ್ದಾರೆ. ಮತದಾನ ಮಾಡುವಂತೆ ಇತರರಿಗೂ ಪ್ರೇರೇಪಿಸಬೇಕು. ನಾವು ಯಾವಾಗಲೂ ಅಮೂಲ್ಯವಾದ ಮತದಾನದ ಹಕ್ಕನ್ನು ಗೌರವಿಸಬೇಕು. ಸ್ವಾತಂತ್ರ್ಯ ಬಂದಾಗಿನಿಂದ, ನಮ್ಮ ಸಂವಿಧಾನವು ಧರ್ಮ, ಜನಾಂಗ, ಜಾತಿ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ನಾಗರಿಕರಿಗೆ ಮತದಾನದ ಹಕ್ಕನ್ನು ನೀಡಿದೆ. ಇದಕ್ಕಾಗಿ ನಮ್ಮ ಸಂವಿಧಾನ ರಚನಾಕಾರರಿಗೆ ನಾವು ಋಣಿಯಾಗಿರಬೇಕು ಎಂದು ರಾಷ್ಟ್ರಪತಿ ಹೇಳಿದರು.

ಇದೇ ವೇಳೆ ಭಾರತದ ಚುನಾವಣಾ ಆಯೋಗದ 'ಹಲೋ ವೋಟರ್ಸ್' ಎಂಬ ಆನ್‌ಲೈನ್ - ಡಿಜಿಟಲ್ ರೇಡಿಯೋ ಸೇವೆಗೆ ರಾಮನಾಥ್​ ಕೋವಿಂದ್ ಚಾಲನೆ ನೀಡಿದರು.

ABOUT THE AUTHOR

...view details