ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಉಪ - ರಾಷ್ಟ್ರೀಯತೆ ಹೆಚ್ಚಳ.. 'ಮಹಾ' ಸಿಎಂ ಯಡವಟ್ಟಿನ ಕುರಿತ ವಿಶ್ಲೇಷಣೆ.. - ಭಾರತದಲ್ಲಿ ಉಪ- ರಾಷ್ಟ್ರೀಯತೆ ಹೆಚ್ಚಳ

ಮಹಾರಾಷ್ಟ್ರದೊಂದಿಗೆ ಬೆಳಗಾವಿ ವಿಲೀನಗೊಳ್ಳಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಡಿದ ಟ್ವೀಟ್ ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸಿದೆ. ಎರಡೂ ರಾಜ್ಯಗಳು ಜಿಲ್ಲೆಯ ಮೇಲೆ ಐತಿಹಾಸಿಕ ಹಕ್ಕು ಸ್ಥಾಪಿಸಿವೆ. ಈ ವಿಚಾರವನ್ನು ಮಹಾರಾಷ್ಟ್ರ ಏಕೀಕಣ ಸಮಿತಿ (ಎಂಇಎಸ್) ಬೆಳಗಾವಿಯಲ್ಲಿ ವಾಸಿಸಿರುವ ಮರಾಠಿ ಜನರೊಂದಿಗೆ ಸೇರಿ ರಾಜಕೀಯ ಆಂದೋಲನವನ್ನು ಆರಂಭಿಸಿದೆ..

Sub-nationalism
ಭಾರತದಲ್ಲಿ ಉಪ- ರಾಷ್ಟ್ರೀಯತೆ ಹೆಚ್ಚಳ..

By

Published : Jan 20, 2021, 4:23 PM IST

ಭಾರತದ ಸಾಮಾಜಿಕ ವೈವಿಧ್ಯತೆಗೆ ಧ್ವನಿ ನೀಡುವುದು ಅದರ ಏಕತೆಯ ವೈಶಿಷ್ಟ್ಯವಾಗಿದೆ. ರಾಜ್ಯಗಳ ಭಾಷಾವಾರು ಸಂಘಟನೆಯ ಗುರಿಯು ಆಯಾ ಭಾಷಾ ರಾಜ್ಯಗಳು ತಮ್ಮ ವೈಶಿಷ್ಟ್ಯವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರ ಜತೆಗೆ ರಾಷ್ಟ್ರದ ಜತೆಗೆ ವಿಲೀನಗೊಳ್ಳುವ ಉದ್ದೇಶದಿಂದ ಕೂಡಿದೆ.

ರಾಜ್ಯಗಳ ಗಡಿಗಳನ್ನು ಗುರುತಿಸುವಾಗ, ಮಿಶ್ರ ಜನಸಂಖ್ಯೆಯ ಪ್ರದೇಶಗಳು, ಕೆಲವೊಮ್ಮೆ ಅದರ ಭಾಷಾವಾರು ಜನಸಂಖ್ಯೆಯೊಂದಿಗೆ ಗುರುತಿಸಕೊಳ್ಳದ ರಾಜ್ಯಗಳಿಗೆ ಸೇರ್ಪಡೆಗೊಂಡಿತ್ತು. ಈ ಜನಸಂಖ್ಯೆಯಲ್ಲಿ ಹಲವರು ತಮ್ಮ ಭಾಷಾವಾರು ರಾಜ್ಯಗಳೊಂದಿಗೆ ಸಂಪೂರ್ಣ ವಿಲೀನ ಬಯಸಿದ್ದಾರೆ ಮತ್ತು ಕೆಲವು ರಾಜ್ಯಗಳು ಈ ಭಾಷಾವಾರು ಅಲ್ಪಸಂಖ್ಯಾತರಿಗೆ ಆಯಾ ರಾಜ್ಯದ ಆಡಳಿತದಲ್ಲಿ ಭಾಷಾವಾರು ಆಧಾರದ ಅಡಿ ಮೀಸಲಾತಿ ಇದೆ ಎಂದು ಖಚಿತಪಡಿಸಿವೆ.

ಆದಾಗ್ಯೂ, ರಾಜ್ಯಗಳ ಮರು ವಿಂಗಡನೆಯಿಂದಾಗಿ ಸುಪ್ತವಾಗಿದ್ದ ಹಳೆಯ ಲೋಪದೋಷಗಳನ್ನು ಮತ್ತೆ ಕೆದಕುವ ಅಪಾಯಕಾರಿ ಪ್ರವೃತ್ತಿ ತಲೆ ಎತ್ತಿದೆ. ಇದು ರಾಜ್ಯಗಳ ನಡುವಿನ ಶಾಂತಿ, ಸಹಬಾಳ್ವೆ ಪರಿಕಲ್ಪನೆಯನ್ನು ಪ್ರಶ್ನಿಸಬಹುದು ಮತ್ತು ಭಾರತೀಯ ರಾಷ್ಟ್ರೀಯತೆಯ ಅಡಿಪಾಯ ಅಲುಗಾಡಿಸಬಹುದು.

ಮಹಾರಾಷ್ಟ್ರದೊಂದಿಗೆ ಬೆಳಗಾವಿ ವಿಲೀನಗೊಳ್ಳಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಡಿದ ಟ್ವೀಟ್ ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸಿದೆ. ಎರಡೂ ರಾಜ್ಯಗಳು ಜಿಲ್ಲೆಯ ಮೇಲೆ ಐತಿಹಾಸಿಕ ಹಕ್ಕು ಸ್ಥಾಪಿಸಿವೆ. ಈ ವಿಚಾರವನ್ನು ಮಹಾರಾಷ್ಟ್ರ ಏಕೀಕಣ ಸಮಿತಿ (ಎಂಇಎಸ್) ಬೆಳಗಾವಿಯಲ್ಲಿ ವಾಸಿಸಿರುವ ಮರಾಠಿ ಜನರೊಂದಿಗೆ ಸೇರಿ ರಾಜಕೀಯ ಆಂದೋಲನವನ್ನು ಆರಂಭಿಸಿದೆ. ಬೆಳಗಾವಿ ಮಹಾರಾಷ್ಟ್ರದೊಂದಿಗೆ ವಿಲೀನಗೊಳ್ಳಬೇಕು ಎಂಬುವುದು ಎಂಇಎಸ್ ಹೋರಾಟವಾಗಿದೆ.

ಈ ಮಧ್ಯೆ ಕರ್ನಾಟಕವು ಬೆಳಗಾವಿ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿದೆ. ಜಿಲ್ಲೆಯನ್ನು ಎರಡನೇ ರಾಜಧಾನಿಯ ಸ್ಥಾನಮಾನ ನೀಡಿದೆ ಮತ್ತು ಮಹಾರಾಷ್ಟ್ರದ ಗಡಿ ತಕರಾರು ಕಡಿಮ ಮಾಡಲು ಜಿಲ್ಲೆಯಲ್ಲಿ ಸುವರ್ಣಸೌಧವನ್ನು ನಿರ್ಮಿಸಿ ನಿಯಮಿತವಾಗಿ ಶಾಸನಸಭೆಗಳನ್ನು ನಡೆಸಿದೆ. ಬೆಳಗಾವಿ ನಗರಸಭೆ ಚುನಾವಣೆಗಳಲ್ಲಿ ಪ್ರತಿಬಾರಿ ಎಂಇಎಸ್ ಮತ್ತು ಕರ್ನಾಟಕದಲ್ಲಿರುವ ರಾಜಕೀಯ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತದೆ. ಉದ್ಧವ್ ಠಾಕ್ರೆ ಅವರ ಟ್ವೀಟ್ ಯಥಾಸ್ಥಿತಿಯನ್ನು ಬದಲಾಯಿಸಿದೆ ಮತ್ತು ಶಿವಸೇನೆ ಇದೀಗ ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವ ಸಕ್ರಿಯ ಆಂದೋಲನಕ್ಕೆ ಹೆಚ್ಚಿನ ಶಕ್ತಿ ತುಂಬಿದೆ.

ಶಿವಸೇನೆ ತನ್ನ ರಾಜಕೀಯ ಸಿದ್ದಾಂತವನ್ನು ಭಾಷಾ ಹೆಗ್ಗಳಿಕೆ ಮತ್ತು ಹಿಂದುತ್ವದ ಪರಿಕಲ್ಪನೆಗಳ ಆಧಾರದಲ್ಲಿ ನಿರ್ಮಿಸಿದೆ. ಕರ್ನಾಟಕದಲ್ಲಿ ಅಸಂಖ್ಯಾತ ಕನ್ನಡ ಪರ ಸಂಸ್ಥೆಗಳಿಂದ ಪ್ರತಿನಿಧಿಸಲ್ಪಡುವ ಅದರ ಭಾಷಾ ಕೋಮುವಾದಕ್ಕೆ ಅನ್ಯವಾಗಿಲ್ಲ. ಭಾರತೀಯ ಭೂಪಟದೊಂದಿಗೆ ಹಂಚಿಕೊಂಡಿರುವ ಕರ್ನಾಟಕದ ಗಡಿ ರೇಖೆಗಳು ಯಾವ ರೀತಿ ತಕರಾರಿಗೆ ಒಳಗಾಗಿದೆ ಎಂಬುದರ ಸಂಕೇತವೇ ಬೆಳಗಾವಿ ಜಿಲ್ಲೆ. ದೊಡ್ಡ ಪ್ರಶ್ನೆಯೆಂದ್ರೆ, ಒಂದು ವೇಳೆ ಮಹಾರಾಷ್ಟ್ರದ ಹಕ್ಕನ್ನು ಪರಿಗಣಿಸಿದ್ರೆ ಯಾವ ರೀತಿಯ ದೈತ್ಯಾಕಾರವಾಗಿ ಭಾರತದ ಮೇಲೆ ಕಾಡಲಿದೆ?.

ಈಗಿನ ಭಾಷಾವಾರು ಆಧಾರದ ಮೇಲೆ ರಚನೆಗೊಂಡಿರುವ ರಾಜ್ಯಗಳು ಏಕರೂಪದ ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಜನಸಂಖ್ಯೆಯನ್ನು ಹೊಂದಿವೆ ಹೊರತು ಪ್ರಾದೇಶಿಕ ಗಡಿರೇಖೆಗಳಿಂದ ರೂಪುಗೊಂಡಿಲ್ಲ. ಬೆಳಗಾವಿಯ ಮೇಲೆ ಮಹಾರಾಷ್ಟ್ರದ ಹಕ್ಕನ್ನು ಒಪ್ಪಿಕೊಂಡರೆ, ಪೂರ್ತಿ ಗೋವಾ ರಾಜ್ಯವು ಮಹಾರಾಷ್ಟ್ರದ ಮುಂದಿನ ಹಕ್ಕಗಾಗಿರುತ್ತದೆ. ಕೇರಳದ ಸ್ವಾಧೀನದಲ್ಲಿರುವ ಕಾಸರಗೋಡು ಆಗಿನ ಮದ್ರಾಸ್ ಪ್ರಾಂತ್ಯದ ಅಡಿಯಲ್ಲಿದ್ದ ಕೆನರಾ ಜಿಲ್ಲೆಯ ಭಾಗವಾಗಿತ್ತು. ಹಾಗಾಗಿ, ಕಾಸರಗೋಡು ಮೇಲಿನ ಕರ್ನಾಟಕದ ಹಕ್ಕನ್ನು ಕೂಡ ಪರಿಗಣಿಸಬೇಕಾಗುತ್ತದೆ.

ಕನ್ಯಾಕುಮಾರಿ ತಿರುವಾಂಕೂರು ರಾಜಾಡಳಿದ ಭಾಗವಾಗಿತ್ತು ಮತ್ತು ಮಾರ್ಥಂಡಮ್ ಮತ್ತು ನಾಗರ್‌ಕೋಯಿಲ್ ಭೂಭಾಗದ ಮೇಲೆ ಕೇರಳ ಐತಿಹಾಸಿಕ ಆಧಾರದ ಮೇಲೆ ಹಕ್ಕು ಸಾಧಿಸಬಹುದು. ಹೀಗೆ ವಿವಾದಿತ ಮತ್ತು ತಕರಾರು ಹೊಂದಿರುವ ಗಡಿಪ್ರದೇಶಗಳ ಮೇಲೆ ಮುಂದಿನ ದಿನಗಳಲ್ಲಿ ಇಂತಹ ಹಕ್ಕು ಪ್ರತಿಪಾದನೆಯಾಗಲಿದೆ. ಇದು ಭಾರತೀಯ ರಾಷ್ಟ್ರೀಯತೆಯನ್ನು ಅಸ್ಥಿರಗೊಳಿಸುವ ಅಂಶಗಳಲ್ಲಿ ಒಂದಾಗುವ ಆತಂಕ ಕೂಡ ಇದೆ.

ಭಾರತದ ರಾಷ್ಟ್ರ-ರಾಜ್ಯವನ್ನು ಹೇಗೆ ಕಲ್ಪಿಸಲಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಅದು ಕೆಲವು ದಿಕ್ಕಗಳನ್ನು ತೋರಿಸುತ್ತದೆ. ರಾಜಕೀಯ ವಿಜ್ಞಾನಿ ಬೆನೆಡಿಕ್ಟ್ ಆಂಡರ್ಸನ್, ರಾಷ್ಟ್ರಗಳು ಕಲ್ಪಿತ ಸಮುದಾಯಗಳಾಗಿವೆ ಎಂದು ಉಲ್ಲೇಖಿಸಿದ್ದರು. ಅವರ ಸಿದ್ಧಾಂತದ ಪ್ರಕಾರ, ಭಾರತವೂ ಒಂದು ಕಲ್ಪಿತ ಸಮುದಾಯವಾಗಿದ್ದು, ಇದರಲ್ಲಿ ವಿವಿಧ ಸಮುದಾಯಗಳನ್ನು ಒಟ್ಟಿಗೆ ಜೋಡಿಸುವ ಸಾಮಾನ್ಯ ಸಂಯೋಜಿತ ಸಂಸ್ಕೃತಿ ಮತ್ತು ಐತಿಹಾಸಿಕ ನಿರೂಪಣೆಯನ್ನು ರೂಪಿಸುವಲ್ಲಿ ನಮ್ಮ ಸಂವಿಧಾನ ಪಿತಾಮಹರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಆದಾಗ್ಯೂ, ಆಧುನಿಕ ಭಾರತೀಯ ರಾಷ್ಟ್ರದ ಸಂಯೋಜಿತ ಇತಿಹಾಸಕ್ಕೆ ಸವಾಲು ಮಾಡುವುದು ಭಾಷಾವಾರು ಅಡಿಪಾಯವನ್ನು ಹೊಂದಿರುವ ಉಪ-ರಾಷ್ಟ್ರೀಯತೆಯಾಗಿದೆ. ತದ ನಂತರ ಈ ಉಪ-ರಾಷ್ಟ್ರೀಯತೆ ಸಿದ್ದಾಂತವು ಕೆಲವು ಜನಸಂಖ್ಯೆಯ ನಿರೂಪಣೆಯನ್ನು ಪ್ರಶ್ನಿಸಲಿದೆ. ಹಾಗೆಯೇ ಆಧುನಿಕ ನಿರೂಪಣೆಯನ್ನು ಜನರ ಐತಿಹಾಸಿಕ ಸ್ಮರಣೆಯ ಮೂಲಕ ಪ್ರಶ್ನಿಸುವ ಉದ್ದೇಶ ಇದರಲ್ಲಿ ಅಡಗಿದೆ.

ರಾಜಕಾರಣಿಗಳು ದೇಶದ ಭಾಷಾವಾರು ಪ್ರಾಂತ್ಯ ರಚನೆಯ ಲೋಪದೋಷಗಳನ್ನು ಬಳಸುವುದನ್ನು ತಪ್ಪಿಸಿದ್ರೆ ಅದೊಂದು ಜವಾಬ್ದಾರಿಯುತ ನಿರ್ಧಾರವಾಗಿರುತ್ತದೆ. ನಗರ ಪ್ರದೇಶಗಳು ಹೆಚ್ಚು ಕಾಸ್ಮೋಪಾಲಿಟನ್ ಆಗಿರುವುದರಿಂದ ಭಾರತೀಯ ಜನಸಂಖ್ಯೆಯು ವೈವಿಧ್ಯಮಯವಾಗಿದೆ. ಬೆಳಗಾವಿ ಕೂಡ ಆ ದಿಕ್ಕಿನಲ್ಲಿ ಸಾಗಲಿದೆ. ಉದ್ಧವ್ ಠಾಕ್ರೆ ಅವರ ಹೇಳಿಕೆಯು ಸಂಕುಚಿತ ಭಾಷಾ ರಾಜಕಾರಣದಿಂದ ಬಂದಿದೆ.

ಅದನ್ನು ಸುಲಭವಾಗಿ ಕಡೆಗಣಿಸಬಹುದು. ಆದಾಗ್ಯೂ, ಭಾಷಾ ಅಲ್ಪಸಂಖ್ಯಾತರನ್ನು ಹೊಂದಿರುವ ರಾಜ್ಯಗಳು ತಮ್ಮ ರಾಜ್ಯದ ಆಡಳಿತದಲ್ಲಿ ಅವರು ಸಮರ್ಪಕವಾಗಿ ಪ್ರತಿನಿಧಿಸಲ್ಪಟ್ಟಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಭಾಷಾ ಕೋಮುವಾದದ ಸಣ್ಣತನದಲ್ಲಿ ಭಾರತದ ಪರಿಕಲ್ಪನೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಜನಸಂಖ್ಯೆಯ ಭಾಷಾವಾರು ಗುರುತಿಸುವಿಕೆಯನ್ನು ಸಹ ಕಡೆಗಣಿಸುವಂತಿಲ್ಲ. ಪರಿಪೂರ್ಣ ಒಕ್ಕೂಟವು ಅಂತಿಮವಾಗಿ ಕೋಟೆಯ ಮೇಲೆ ಹಿಡಿತ ಸಾಧಿಸುತ್ತದೆ.

-ವರ್ಗೀಸ್ ಪಿ. ಅಬ್ರಹಾಂ

ABOUT THE AUTHOR

...view details