ಲಡಾಖ್: ಭಾರತ-ಚೀನಾ ನಡುವಿನ ಹಿಂಸಾತ್ಮಕ ಸಂಘರ್ಷದ ಬಳಿಕ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಲೇಹ್ಗೆ ತೆರಳಿ ಅಲ್ಲಿನ ಯೋಧರಿಗೆ ಧೈರ್ಯ ತುಂಬಿದ್ದರು.
ಭಾರತ-ಚೀನಾ ಗಡಿಯಲ್ಲಿ Su-30MKI ಯುದ್ಧ ವಿಮಾನ ಹಾರಾಟ: ಸವಾಲಿಗೆ ಸಿದ್ಧ ಎಂದ ವಿಂಗ್ ಕಮಾಂಡರ್! - Su-30MKI ಯುದ್ಧ ವಿಮಾನ
ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದೀಗ ಸ್ಥಳಕ್ಕೆ ವಾಯುಸೇನೆ ಕೂಡ ಲಗ್ಗೆ ಹಾಕಿದೆ.
ಇದರ ಬೆನ್ನಲ್ಲೇ ಇದೀಗ ಭಾರತ-ಚೀನಾ ಗಡಿ ಸಮೀಪವಿರುವ ಫಾರ್ವರ್ಡ್ ಏರ್ಬೇಸ್ನಲ್ಲಿ ಭಾರತ ವಾಯು ಕಾರ್ಯಾಚರಣೆ ನಡೆಸುತ್ತಿದ್ದು, Su-30MKI, MiG-29 ಹಾಗೂ ಅಪಾಚೆ ದಾಳಿ ಹೆಲಿಕಾಪ್ಟರ್ ಹಾರಾಟ ನಡೆಸಿವೆ. ಚೀನಾಗೆ ಎದಿರೇಟು ನೀಡಲು ಭಾರತ ಸಕಲ ರೀತಿಯಲ್ಲಿ ಸನ್ನದ್ಧವಾಗಿದ್ದು, ಇದೀಗ ವಾಯುಸೇನೆ ಗಡಿಯಲ್ಲಿ ತನ್ನ ಸಾಮರ್ಥ್ಯ ತೋರಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿಂಗ್ ಕಮಾಂಡರ್, ಎಲ್ಲಾ ಸವಾಲು ಎದುರಿಸಲು ನಾವು ಸಿದ್ಧರಾಗಿದ್ದು, ಪ್ರತಿಯೊಬ್ಬ ಯೋಧರೂ ಸಂಪೂರ್ಣ ತರಬೇತಿ ಹೊಂದಿದ್ದಾರೆ. ನಮ್ಮಲ್ಲಿ ಯಾವಾಗಲೂ ಜೋಶ್ ಇರುತ್ತದೆ ಎಂದಿದ್ದು, ಮಿಲಿಟರಿಗೆ ಅಗತ್ಯವಾದ ಬೆಂಬಲ ನೀಡಲು ಇಂಡಿಯನ್ ಏರ್ಫೋರ್ಸ್ ಸನ್ನದ್ಧವಾಗಿದೆ ಎಂದಿದ್ದಾರೆ.