ಕರ್ನಾಟಕ

karnataka

ETV Bharat / bharat

ಸಂಘಿ ವಿಜ್ಞಾನ ಓದುವವರನ್ನ ಮುಂದೆ ಮೂರ್ಖರು ಎಂದೆನ್ನಬಹುದು: ಕಾಂಗ್ರೆಸ್​ ಮುಖಂಡ - ಬಿಜೆಪಿ

ಬಿಜೆಪಿ ಮುಖಂಡ ಗೋಪಾಲ್ ಭಾರ್ಗವ್ ಅವರು ಬೋಪಾಲ್​ನಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ನೀಡುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, 'ಬಾಲ್ಯದಿಂದಲೇ ಮಾಂಸಾಹಾರಿಗಳಾದರೇ ಮುಂದೊಂದು ದಿನ ಮನುಷ್ಯರನ್ನೆ ತಿನ್ನಬೇಕಾಗುತ್ತದೆ' ಎಂದಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡ 'ಸಂಘಿ ವಿಜ್ಞಾನವನ್ನು ಅಧ್ಯಯನ ಮಾಡುವ ಜನರನ್ನು ಮೂರ್ಖರನ್ನಾಗಿ ಮಾಡಿ ಬಿಡಬಹುದು' ಎಂದಿದ್ದಾರೆ.

ಅಭಿಷೇಕ್ ಮನು ಸಿಂಘ್ವಿ

By

Published : Nov 1, 2019, 7:53 AM IST

ನವದೆಹಲಿ: ಬಾಲ್ಯದಿಂದ ಮಕ್ಕಳು ಮಾಂಸಾಹಾರ ತಿಂದರೆ ಮುಂದೆ ಮನುಷ್ಯರನ್ನೇ ತಿನ್ನಬಹುದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಬಿಜೆಪಿ ಮುಖಂಡ ಗೋಪಾಲ್ ಭಾರ್ಗವ್ ಅವರಿಗೆ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ತಿರುಗೇಟು ನೀಡಿದ್ದಾರೆ.

'ಸಂಘಿ (ಸಂಘ ಪರಿವಾರ) ವಿಜ್ಞಾನವನ್ನು ಅಧ್ಯಯನ ಮಾಡುವುದರಿಂದ ಜನರನ್ನು ಮೂರ್ಖರನ್ನಾಗಿ ಮಾಡಿ ಬಿಡಬಹುದು' ಎಂದು ಭಾರ್ಗವ್​ ಅವರನ್ನು ಟ್ವಿಟ್ಟರ್​ನಲ್ಲಿ ಕಿಚಾಯಿಸಿದ್ದಾರೆ.

ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಮೊಟ್ಟೆ ನೀಡುವ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾರ್ಗವ್​ ಅವರು, ನಾವು ಬಾಲ್ಯದಿಂದಲೇ ಮಾಂಸಾಹಾರಿಗಳಾದರೇ ಮುಂದೊಂದು ದಿನ ಮನುಷ್ಯರನ್ನೇ ತಿನ್ನಬೇಕಾಗುತ್ತದೆ. ನಮ್ಮ ಸನಾತನ ಸಂಸ್ಕೃತದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಸರ್ಕಾರದಿಂದ ಇನ್ನೇನು ನಿರೀಕ್ಷಿಸಬಹುದು?ಎಂದು ಪ್ರಶ್ನಿಸಿದ್ದರು. ಬಿಜೆಪಿ ನಾಯಕ ಭಾರ್ಗವ್​ ಅವರ ಈ ಮಾತು ಈಗ ವಿವಾದದ ಕಿಚ್ಚು ಹೊತ್ತಿಸಿದೆ.

ABOUT THE AUTHOR

...view details