ಕರ್ನಾಟಕ

karnataka

ETV Bharat / bharat

ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿರುವ ಬಹುತೇಕ ಕೋವಿಡ್​-19 ಸೋಂಕಿತರು! - ಶ್ವಾಸವ್ಯವಸ್ಥೆ ವೈಫಲ್ಯ

ಕೋವಿಡ್​-19ನ ಸಂಕಷ್ಟದ ಸಮಯದಲ್ಲಿ ಜಗತ್ತಿನ ಹಲವಾರು ಆಸ್ಪತ್ರೆಗಳು ತಮ್ಮದೇ ಆದ ಸ್ವಂತ ಚಿಕಿತ್ಸಾ ಪದ್ಧತಿಯ ಕುರಿತಾಗಿ ಕೆಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಿವೆ. ಆದರೆ ಇಂಥ ಚಿಕಿತ್ಸಾ ಪದ್ಧತಿಗಳಿಂದ ಯಾವಾಗಲೂ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇರುವುದಿಲ್ಲ ಹಾಗೂ ಇದರಿಂದ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳೇ ಹೆಚ್ಚಾಗಬಹುದು ಎನ್ನಲಾಗಿದೆ.

Study reveals most critical COVID-19 patients survive with standard treatment
Study reveals most critical COVID-19 patients survive with standard treatment

By

Published : May 8, 2020, 7:53 PM IST

ಮೆಸಾಚುಸೆಟ್ಸ್​ (ಅಮೆರಿಕ): ಕೋವಿಡ್​-19 ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುತೇಕ ರೋಗಿಗಳು ಈಗಾಗಲೇ ಗೊತ್ತಿರುವ ಸಾಮಾನ್ಯ ಔಷಧಿ ಹಾಗೂ ಚಿಕಿತ್ಸಾ ಪದ್ಧತಿಗಳಿಂದಲೇ ಗುಣಮುಖರಾಗುತ್ತಿದ್ದಾರೆ ಎಂದು ಬೋಸ್ಟನ್​ನ ಎರಡು ಆಸ್ಪತ್ರೆಗಳ ತಜ್ಞರು ತಿಳಿಸಿದ್ದಾರೆ. ಕೋವಿಡ್ ಸೊಂಕಿನಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿ ಐಸಿಯುನಲ್ಲಿ ವೆಂಟಿಲೇಟರ್​ ಮೇಲಿದ್ದ ರೋಗಿಗಳಿಗೆ ಕೂಡ ಈಗಾಗಲೇ ನಿರ್ದಿಷ್ಟಪಡಿಸಿದ ಚಿಕಿತ್ಸಾ ಕ್ರಮವೇ ಪ್ರಭಾವ ಬೀರಿದೆ ಎಂದು ಅವರು ತಿಳಿಸಿದ್ದಾರೆ.

ಮೆಸಾಚುಸೆಟ್ಸ್​ ಜನರಲ್​ ಹಾಸ್ಪಿಟಲ್​ ಮತ್ತು ಬೆಥ್ ಇಸ್ರೇಲ್ ಡೀಕೊನೆಸ್ ಮೆಡಿಕಲ್​ ಸೆಂಟರ್​ಗಳ ವೈದ್ಯಕೀಯ ಪರಿಣಿತರು ಕೋವಿಡ್​ ರೋಗಿಗಳ ಚಿಕಿತ್ಸೆಯ ಕುರಿತಾಗಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲ ಮಾಹಿತಿ ಅಮೆರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಆ್ಯಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್​ನಲ್ಲಿ ಪ್ರಕಟಗೊಂಡಿದೆ.

ಕೋವಿಡ್​-19ನ ಸಂಕಷ್ಟದ ಸಮಯದಲ್ಲಿ ಜಗತ್ತಿನ ಹಲವಾರು ಆಸ್ಪತ್ರೆಗಳು ತಮ್ಮದೇ ಆದ ಸ್ವಂತ ಚಿಕಿತ್ಸಾ ಪದ್ಧತಿಯ ಕುರಿತಾಗಿ ಕೆಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಿವೆ. ಆದರೆ ಇಂಥ ಚಿಕಿತ್ಸಾ ಪದ್ಧತಿಗಳಿಂದ ಯಾವಾಗಲೂ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇರುವುದಿಲ್ಲ ಹಾಗೂ ಇದರಿಂದ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳೇ ಹೆಚ್ಚಾಗಬಹುದು ಎನ್ನಲಾಗಿದೆ.

ಕೋವಿಡ್​-19 ಸೋಂಕಿತರಾಗಿ ಗಂಭೀರ ಸ್ಥಿತಿಯಲ್ಲಿದ್ದ ಹಾಗೂ ಶ್ವಾಸವ್ಯವಸ್ಥೆ ವೈಫಲ್ಯಗೊಂಡು ವೆಂಟಿಲೇಟರ್​ ಮೇಲೆ ಇಡಲಾದ 66 ರೋಗಿಗಳ ಚಿಕಿತ್ಸೆಯ ಸೂಕ್ಷ್ಮ ಮಾಹಿತಿಯನ್ನು ಎಂಜಿಎಚ್​ ಮತ್ತು ಹಾರ್ವರ್ಡ್​ ಮೆಡಿಕಲ್ ಸ್ಕೂಲ್​ನ ಸಹಾಯಕ ಪ್ರಾಧ್ಯಾಪಕ ಸಿ. ಕೋರೆ ಹಾರ್ಡಿನ್ ಅಧ್ಯಯನ ಮಾಡಿದ್ದಾರೆ. ಬಹುತೇಕ ಗಂಭೀರ ಸೋಂಕಿತ ರೋಗಿಗಳಲ್ಲಿ ತೀವ್ರ ಉಸಿರಾಟ ತೊಂದರೆ (Acute Respiratory Distress Syndrome -ARDS) ಉಂಟಾಗುತ್ತದೆ ಎಂಬುದು ಕಂಡು ಬಂದಿದೆ. ಆದರೆ ತೀವ್ರ ಉಸಿರಾಟ ತೊಂದರೆಯ ಸಮಸ್ಯೆಯ ಚಿಕಿತ್ಸೆಯನ್ನು ಕಳೆದ 50 ವರ್ಷಗಳಿಂದಲೂ ಅಧ್ಯಯನ ಮಾಡಲಾಗುತ್ತಿದೆ. ಇದಕ್ಕಾಗಿ ಹಲವಾರು ಪರಿಣಾಮಕಾರಿ ಎಂದು ಸಾಬೀತಾದ ಚಿಕಿತ್ಸಾ ಪದ್ಧತಿಗಳು ಲಭ್ಯವಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹಾರ್ಡಿನ್ ತಿಳಿಸಿದ್ದಾರೆ.

ಗೊತ್ತಿರುವ ಚಿಕಿತ್ಸಾ ವಿಧಾನವನ್ನು ನಾವು ಎಆರ್​ಡಿಎಸ್​ ರೋಗಿಗಳ ಮೇಲೆ ಬಳಸಿದ್ದು, ನಾವಂದುಕೊಂಡ ಹಾಗೆಯೇ ಅವರು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು ತೀರಾ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳ ಸಾವಿನ ಪ್ರಮಾಣ ಇದರಲ್ಲಿ ಶೇ 16.7 ರಷ್ಟಿತ್ತು. ಇದು ಇತರ ಆಸ್ಪತ್ರೆಗಳಲ್ಲಿನ ಸಾವಿನ ಪ್ರಮಾಣಕ್ಕಿಂತ ತೀರಾ ಕಡಿಮೆಯಾಗಿದೆ. ಹಾಗೆಯೇ ವೆಂಟಿಲೇಟರ್​ ಮೇಲಿದ್ದ ರೋಗಿಗಳಿಗೆ 34 ದಿನಗಳ ಚಿಕಿತ್ಸೆ ನೀಡಿದ ನಂತರ ಶೇ 75.8 ರಷ್ಟು ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹಾರ್ಡಿನ್ ಹೇಳಿದ್ದಾರೆ.

ABOUT THE AUTHOR

...view details