ಪುಣೆ:ಹಣದ ವಿಚಾರಕ್ಕೆ ಜಗಳ ನಡೆದು ತಮ್ಮ ರೂಂಮೇಟ್ನನ್ನು 11ನೇ ಮಹಡಿಯಿಂದ ತಳ್ಳಿ ಮೂವರು ವಿದ್ಯಾರ್ಥಿಗಳು ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಇಂದು ನಡೆದಿದೆ.
ಹಣದ ವಿಚಾರಕ್ಕೆ ಗಲಾಟೆ: 11ನೇ ಮಹಡಿಯಿಂದ ತಳ್ಳಿ ರೂಂಮೇಟ್ ನನ್ನು ಕೊಂದ ವಿದ್ಯಾರ್ಥಿಗಳು - ಮಹಾರಾಷ್ಟ್ರದ ಪುಣೆ
ರೂಂಮೇಟ್ನನ್ನು 11ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಅಭಿನವ್ ಜಾಧವ್, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಮೃತ ಸಾಗರ್ (24) ಚಿಲ್ವೇರಿಗೆ ಶೇ.10 ರಷ್ಟು ಬಡ್ಡಿಗೆ 15 ಸಾವಿರ ರೂ. ಸಾಲ ನೀಡಿದ್ದರು. ಇದನ್ನು ಸಾಗರ್ ಸೋಮವಾರ ಹಿಂದಿರುಗಿಸಬೇಕಾಗಿತ್ತು. ಆದರೆ ಹಣ ಹಿಂದಿರುಗಿಸುವಲ್ಲಿ ಸಾಗರ್ ವಿಫಲನಾಗಿದ್ದು, ಪುಣೆಯ ಕೊಂಧ್ವದಲ್ಲಿನ ಬಹುಮಹಡಿ ಕಟ್ಟಡದಲ್ಲಿ ನಾಲ್ವರ ಮಧ್ಯೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿ ಸಾಗರ್ನನ್ನು 11ನೇ ಮಹಡಿಯಿಂದ ಮೂವರು ಸೇರಿ ತಳ್ಳಿರುವುದಾಗಿ ಕೊಂಧ್ವ ಠಾಣೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರನ್ನು ಪೊಲೀಸರು ಬಂಧಿಸಿದ್ದು, ಕೊಲೆ, ದೈಹಿಕ ಹಿಂಸೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.