ಕರ್ನಾಟಕ

karnataka

ETV Bharat / bharat

ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ... ಇಸ್ಲಾಮಿಕ್​ ದೇಶಗಳ ಬಾಯಿ ಮುಚ್ಚಿಸಿದ ಭಾರತ

ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಸ್ಥೆ ಸಭೆಯಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಒತ್ತಿ ಹೇಳಿದೆ

ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಸ್ಥೆ ಸಭೆಯಲ್ಲಿ ಸುಷ್ಮಾ ಸ್ವರಾಜ್

By

Published : Mar 3, 2019, 2:16 PM IST

ನವದೆಹಲಿ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದರ ಎಲ್ಲಾ ವಿಚಾರಗಳು ಭಾರತಕ್ಕೆ ಸೀಮಿತವಾದುವು ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿ, ಇಸ್ಲಾಮಿಕ್​ ದೇಶಗಳ ಸಂಘಟನೆಗೆ ಭಾರತ ಟಾಂಗ್​ ನೀಡಿದೆ.

ಅಬುದಾಬಿಯಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಸ್ಥೆ(OIC) ಆಯೋಜಿಸಿದ್ದ ವಿದೇಶಾಂಗ ಸಚಿವರ ಸಭೆಯಲ್ಲಿ ಕಾಶ್ಮೀರಲ್ಲಿ ಭಾರತ ದಬ್ಬಾಳಿಕೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಟಾಂಗ್​ ನೀಡಿ ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದು ಹೇಳಿ ಒಐಸಿ ಬಾಯಿ ಮುಚ್ಚಿಸಲಾಗಿದೆ.

57 ರಾಷ್ಟ್ರಗಳ ಸದಸ್ಯತ್ವವಿರುವ ಸಂಸ್ಥೆ ಭಾರತಕ್ಕೆ ಗೆಸ್ಟ್​ ಆಫ್ ಹಾನರ್​ ಗೌರವ ನೀಡಿತ್ತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೌರವ ಸ್ವೀಕರಿಸಿ, ಭಯೋತ್ಪಾದನೆ ಹಾಗೂ ಪಾಕ್​ ವಿರುದ್ಧ ಗುಡುಗಿದ್ದರು. ನಿನ್ನೆಯ ಸಭೆಯಲ್ಲಿ ಭಾರತದ ಕಾಶ್ಮೀರದಲ್ಲಿ ಸೇನಾ ಬಲವನ್ನು ಬಳಸಿಕೊಂಡು, ಮುಗ್ದ ಕಾಶ್ಮೀರಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನೇ ಭಾರತ ನೀಡಿದೆ.

ಇನ್ನು ಗಡಿಯಲ್ಲಿನ ಉದ್ವಿಗ್ನತೆ ಕಾರಣ ಭಾರತದ ಸಭೆಯಲ್ಲಿ ಭಾಗವಹಿಸಿದೆ ಎಂದು ಪಾಕ್​ ವಿದೇಶಾಂಗ ಸಚಿವ ಶಾ ಮಹಮ್ಮದ್​ ಖುರೇಷಿ ಗೈರು ಹಾಜರಾಗಿದ್ದರು. ಕಾಶ್ಮೀರದ ವಿಚಾರವಾಗಿ ಸಂಸ್ಥೆ OIC ಪಾಕ್​ಗೆ ಬೆಂಬಲ ನೀಡಲಿದೆ ಎಂದೂ ಖುರೇಷಿ ಹೇಳಿದ್ದರು.

ABOUT THE AUTHOR

...view details