ಕರ್ನಾಟಕ

karnataka

ETV Bharat / bharat

ನಾಲ್ಕು ತಿಂಗಳ ಮಗುವನ್ನು ಕಿತ್ತಾಡಿ ತಿಂದ ಬೀದಿ ನಾಯಿಗಳು! - ಜ್ಯೂಬ್ಲಿ ಹಿಲ್ಸ್​ ಸುದ್ದಿ

ನಾಲ್ಕು ತಿಂಗಳ ಮಗುವನ್ನು ಬೀದಿ ನಾಯಿಗಳು ಕಿತ್ತಾಡಿ ತಿಂದಿರುವ ದಾರುಣ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

ನಾಲ್ಕು ತಿಂಗಳ ಮಗುವನ್ನು ಕಿತ್ತಾಡಿ ತಿಂದ ಬೀದಿ ನಾಯಿಗಳು

By

Published : Sep 29, 2019, 5:34 PM IST

ಹೈದರಾಬಾದ್​:ರಸ್ತೆ ಮೇಲೆ ಬಿಟ್ಟು ಹೋದ ನಾಲ್ಕು ತಿಂಗಳ ಮಗುವನ್ನು ಬೀದಿ ನಾಯಿಗಳು ಕಿತ್ತಾಡಿ ತಿಂದಿರುವ ಘಟನೆ ಹೈದರಾಬಾದ್​ನ ಜೂಬ್ಲಿ ಹಿಲ್ಸ್​ನಲ್ಲಿ ನಡೆದಿದೆ.

ಬಂಜಾರಾ ಹಿಲ್ಸ್​ ನಿವಾಸಿ ಅಲಿ ಅಗ್ಗರ್​ ಗುಲಾಬಿ ಎಂಬಾತ ಸೆಕೆಂಡ್​ ಷೋ ಸಿನಿಮಾ ನೋಡ್ಕೊಂಡು ಮನೆಗೆ ಹಿಂದುರುಗುತ್ತಿದ್ದ. ಆತನ ಮನೆ ಬಳಿ ಕೆಲ ಬೀದಿ ನಾಯಿಗಳು ಗುಂಪಾಗಿ ಜಗಳವಾಡುತ್ತಿದ್ದುದ್ದನ್ನು ಗಮನಿಸಿದ್ದಾನೆ. ಆತನ ನೋಡಿದ ನಾಯಿಗಳು ಓಡಿ ಹೋಗಿವೆ. ಆಗ ನಾಲ್ಕು ತಿಂಗಳ ಮಗುವೊಂದನ್ನು ಎಳೆದಾಡಿ ನಾಯಿಗಳು ತಿಂದಿದ್ದು, ಮಗು ಸಾವನ್ನಪ್ಪಿತ್ತು. ಬಳಿಕ ಬಂಜಾರಾ ಹಿಲ್ಸ್​ ಪೊಲೀಸ್​ ಠಾಣೆಗೆ ಆತ ದೂರು ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಮಗುವನ್ನು ಉಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಘಟನೆ ಕುರಿತು ಬಂಜಾರಾ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details